ಪುತ್ತೂರು: ಪಾಕಿಸ್ತಾನ ಜಿಂದಾಬಾದ್, ರಾಮೇಶ್ವರ ಬಾಂಬ್ ಬ್ಲಾಸ್ಟ್ ವಿರುದ್ಧ ಭಯೋತ್ಫಾದನ ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಲು ಬಂದಿದ್ದೆ. ಈ ವೇಳೆ ತುಮಕೂರು-ಕುಣಿಗಲ್ ರಸ್ತೆಯಲ್ಲಿ ಪೊಲೀಸರು ನಮ್ಮನ್ನು ತಡೆದಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮುರಳಿಕೃಷ್ಣ ಹಸಂತಡ್ಕ ಹೇಳಿದ್ದಾರೆ.
ಪೊಲೀಸ್ ವಶದಿಂದ ಬಿಡುಗಡೆಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾವು ಕೆಟ್ಟ ಕೆಲಸ ಮಾಡಲು ಹೊರಟವರಲ್ಲ. ಜನಜಾಗೃತಿ ಕೆಲಸ ಮಾಡಲು ಹೊರಟವರು. ಪ್ರಜಾಪ್ರಭುತ್ವವನ್ನು ಧಮನಿಸುವ ಕೆಲಸ ಮಾಡಿದ್ರೆ ರಾಜ್ಯದ ಜನತೆ ತಕ್ಕ ಉತ್ತರ ನೀಡುತ್ತಾರೆ. ಇಡೀ ರಾಜ್ಯದಲ್ಲಿ ಮುಂದಿನ ದಿನ ಇದಕ್ಕೆ ವಿರುದ್ಧವಾಗಿ ಪ್ರತಿಭಟನೆಗಳು ನಡೆಯುತ್ತದೆ. ರಾಷ್ಟ್ರ ಪ್ರೇಮ, ರಾಷ್ಟ್ರಜಾಗೃತಿಗಾಗಿ ದಿನದ 24 ಗಂಟೆ, ವರ್ಷದ 365 ದಿನವೂ ದುಡಿಯುತ್ತೇವೆ. ಯಾವ ಮೂಲೆಯಲ್ಲಾದರೂ ಜಾಗೃತಿ ಕೆಲಸ ಮಾಡಲು ಸಿದ್ದ, ತಾಕತ್ತಿದ್ದರೆ ಮುಂದಿನ ದಿನ ತಡೆಯಿರಿ ಎಂದು ಹೇಳಿರುವ ಮುರಳಿಕೃಷ್ಣ ಹಸಂತಡ್ಕ ರಾಜ್ಯ ಸರ್ಕಾರಕ್ಕೆ ನೇರ ಸವಾಲೆಸೆದಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ