ಪುತ್ತೂರು: ಕಾಂಗ್ರೇಸ್ ರಾಜ್ಯದಲ್ಲಿ ಅಡಳಿತ ಬಂದ ಮೇಲೆ ಭಯೋತ್ಪಾದನೆಯ ಕರಿನೆರಳು ದಟ್ಟವಾಗಿರುವುದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯಲ್ಲಿ ಪಾಕ್ ಪರವಾಗಿ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಘಟನೆಯಿಂದ ರಾಜ್ಯದ ಜನತೆ ಭಯಭೀತರಾಗುವಂತೆ ಮಾಡಿದೆ. ಆದ್ದರಿಂದ ರಾಜ್ಯದ ಜನತೆಗೆ ನೈತಿಕ ಸ್ಥೈರ್ಯ ತುಂಬಲು ಅಲ್ಪಸಂಖ್ಯಾತರ ಮಿತಿಮೀರಿದ ತುಷ್ಟೀಕರಣಕ್ಕೆ ಕಡಿವಾಣ ಹಾಕಲು ಸಂಘಪರಿವಾರದ ಮುಖಂಡ ಮುರಳೀಕೃಷ್ಣ ಹಸಂತಡ್ಕರವರು ತುಮಕೂರಿಗೆ ಪ್ರತಿಭಟನೆಗೆ ತೆರಳುವ ಸಂದರ್ಭದಲ್ಲಿ ಬಂಧಿಸಿರುವುದು ಖಂಡನೀಯ ಹಾಗೂ ಈ ರೀತಿಯ ವರ್ತನೆಯಿಂದ ರಾಜ್ಯದ ಕಾಂಗ್ರೆಸ್ ಸರಕಾರ ಭಯೋತ್ಪಾದನೆಯನ್ನು ಮಾಡುವವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ ಹಾಗೆ ಆಗುತ್ತದೆ ಎಂದು ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹೇಳಿದ್ದಾರೆ.