ಪುತ್ತೂರು: ಇಲ್ಲಿನ ಹೆಚ್ ಪಿಆರ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ 4ನೇ ಸಾಲಿನ ವಿದ್ಯಾರ್ಥಿಗಳ ಉಧ್ಘಾಟನೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಮಾರ್ಚ್ .2 ರಂದು ಅರುಣ ಕಲಾ ಮಂದಿರ ಪುತ್ತೂರಿನಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇರಮ್ಯಾನ್ ಪ್ರೊ. ಹರಿಪ್ರಸಾದ್ ರೈ, ಮುಖ್ಯ ಅಥಿತಿಯಾಗಿ ಪುತ್ತೂರು ಆಯುಷ್ ಮೆಡಿಕಲ್ ಆಫೀಸರ್ ಡಾ. ಸ್ಮಿತಾ ಗೌರವ ಅತಿಥಿಯಾಗಿ ಸುಳ್ಯ ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಬಿ. ಎಮ್ ಪ್ರೇಮಾ ಉಪಸ್ಥಿತರಿದ್ದರು.
ಅತಿಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು ದೀಪ ಪ್ರಜ್ವಲನೆ ಮಾಡಿ ಕಾರ‍್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಬಿ. ಎಮ್ ಪ್ರೇಮಾ ಇವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. ಬಳಕ ಆಧುನಿಕ ನರ್ಸಿಂಗ್ ನಿರ್ಮಾತೃ ಲೇಡಿ ನೈಟಿಂಗೇಲ್ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಲಾಯಿತು.
ಪುತ್ತೂರಿನ ಸರಕಾರಿ ಆಸ್ಪತ್ರೆ ನರ್ಸಿಂಗ್ ಮೇಲ್ವಿಚಾರಕರು ನಾಗವೇಣಿ ಮತ್ತು ನರ್ಸಿಂಗ್ ಅಧಿಕಾರಿ ಸರೋಜ, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲೆ ಪ್ರೀತಾ ಮತ್ತು ಉಪ ಪ್ರಾಂಶುಪಾಲೆ ಚೈತ್ರ, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪೋಷಕರು ಹಾಜರಿದ್ದರು. ಉಪನ್ಯಾಕರ ವರ್ಗದ ದಿಶಾಂತ್ ಸ್ವಾಗತಿಸಿ, ಅನುಷಾ ರೆಬೆಲ್ಲೋ ಹಾಗೂ ಆಯಿಷತ್ತುಲ್ ಅಸ್ಪಾನಾ ನಿರೂಪಿಸಿ, ತ್ರಿವೇಣಿ ಇವರು ವಂದಿಸಿದರು. ನಂತರ ಸಾಂಸ್ಕೃತಿಕ ಕಾರ‍್ಯಕ್ರಮ ಜರುಗಿತು.