ಅಧ್ಯಕ್ಷರಾಗಿ ಜಯಂತ್ ನಡುಬೈಲು, ಉಪಾಧ್ಯಕ್ಷರಾಗಿ ಆನಂದ ಪೂಜಾರಿ ಸರ್ವೆದೋಳ ಅವಿರೋಧ ಆಯ್ಕೆ
ಪುತ್ತೂರು: ಪುತ್ತೂರು ಬ್ರಹ್ಮಶ್ರೀ ವಿವಿದೋದ್ಧೇಶ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಯಂತ ನಡುಬೈಲು ಯನ್., ಉಪಾಧ್ಯಕ್ಷರಾಗಿ ಕೆ. ಆನಂದ ಪೂಜಾರಿ ಸರ್ವೆದೋಳರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾ.6ರಂದು ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷರ ಆಯ್ಕೆಗೆ ನಿರ್ದೇಶಕಿ ಉಷಾ ಕೆ. ಅಂಚನ್ ಸೂಚಿಸಿ ನಿರ್ದೇಶಕ ಉಮೇಶ್ ಕುಮಾರ್ ಬರೆಮೇಲು ಅನುಮೋದಿಸಿದರು. ಉಪಾಧ್ಯಕ್ಷರ ಆಯ್ಕೆಗೆ ನಿರ್ದೇಶಕ ಕೆ.ಪಿ.ದಿವಾಕರ್ ಸೂಚಿಸಿ ರವೀಂದ್ರ ಕಲ್ಕಾರ್ ಅನುಮೋದಿಸಿದರು. ನಿರ್ದೇಶಕರುಗಳಾದ ಎ. ಸತೀಶ್ ಕುಮಾರ್ ಕೆಡೆಂಜಿ, ಕೆ. ನಾರಾಯಣ ಪೂಜಾರಿ ಕುರಿಕ್ಕಾರ, ಉಪಸ್ಥಿತರಿದ್ದರು. ಪುತ್ತೂರು ಸಹಕಾರ ಸಂಘಗಳ ಮಾರಾಟಾಧಿಕಾರಿ ಶೋಭಾ ಎನ್. ಎಸ್. ಚುನಾವಣಾಧಿಕಾರಿಯಾಗಿದ್ದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಶ್ಮಿತಾ ಡಿ., ಸಿಬಂದಿ ಅಕ್ಷಿತಾ ಸಹಕರಿಸಿದರು.
ಜಯಂತ್ ನಡುಬೈಲು ಎನ್.:
ಮುಂಡೂರು ಗ್ರಾಮದ ನಡುಬೈಲ್ಗುತ್ತಿನ ನಾರಾಯಣ ಸಾಲಿಯಾನ್ ಹಾಗೂ ಅಪ್ಪಿರವರ ಪುತ್ರರಾದ ಜಯಂತ್ ನಡುಬೈಲುರವರು ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷರಾಗಿ, ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಹಲವು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ‘ಗೆಜ್ಜೆಗಿರಿ ನಂದನ ಬಿತ್ತಿಲ್’ನ ಅಧ್ಯಕ್ಷರಾಗಿ, ಆತ್ಮಶಕ್ತಿ ಸೊಸೈಟಿ ಮತ್ತು ಆಸ್ಪತ್ರೆ ಟ್ರಸ್ಟ್ನ ಗೌರವಾನ್ವಿತ ಟ್ರಸ್ಟಿಯಾಗಿ ಉದ್ಧೇಶಿತ ಆತ್ಮಶಕ್ತಿ ಮೆಡಿಕಲ್ ಕಾಲೇಜ್ನ ಪ್ರವರ್ತಕರಾಗಿ, ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ನೈತಾಡಿ ಅಕ್ಷಯ ಫಾರ್ಮ್ನ ಮಾಲಕರಾದ ಇವರು ಪ್ರಸ್ತುತ ಸಂಪ್ಯದಲ್ಲಿ ಅಕ್ಷಯ ಕಾಲೇಜನ್ನು ಮುನ್ನೆಡೆಸುತ್ತಿದ್ದಾರೆ.
ಕೆ. ಆನಂದ ಪೂಜಾರಿ ಸರ್ವೆದೋಳ:
ಸರ್ವೆ ಗ್ರಾಮದ ಆನಂದಸದನ ನಿವಾಸಿಯಾದ ಕೆ. ಆನಂದ ಪೂಜಾರಿ ಸರ್ವೆದೋಳರವರು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ, ಸರ್ವೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, ಭಕ್ತಕೋಡಿ ಶ್ರೀರಾಮ ಭಜನಾ ಮಂದಿರ ಮತ್ತು ಶ್ರೀರಾಮ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಬೆಳ್ತಂಗಡಿ ಶ್ರೀಗುರುದೇವ ವಿವಿದೋದ್ಧೇಶ ಸಹಕಾರ ಸಂಘದ ನಿರ್ದೇಶಕರಾಗಿದ್ದಾರೆ.