ಬಡಗನ್ನೂರು: ರೋಟರಿ ಕ್ಲಬ್ ಪುತ್ತೂರು ಯುವ ಇದರ ವತಿಯಿಂದ ಕೊಡ ಮಾಡಿದ ವಿಜ್ಞಾನ ಪ್ರಯೋಗಾಲಯದ ಸಾಮಾಗ್ರಿಗಳ ಉದ್ಘಾಟನಾ ಕಾರ್ಯಕ್ರಮವು ಮಾ.6ರಂದು ಪಟ್ಟೆಯ ಪ್ರತಿಭಾ ಪ್ರೌಢಶಾಲೆಯಲ್ಲಿ ನಡೆಯಿತು.
ಸುಮಾರು 83,500 ರೂಪಾಯಿಗಳ ವಿಜ್ಞಾನ ಪ್ರಯೋಗಾಲಯದ ಸಾಮಾಗ್ರಿಗಳ ಉದ್ಘಾಟನೆಯನ್ನು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೋ|ಎಚ್ಆ.ರ್ ಕೇಶವ ರವರು ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಗಳು ಮಕ್ಕಳ ಕಲಿಕೆಗೆ ಪೂರಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಾಗ ಮಕ್ಕಳು ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಿ ಮೂಡಿಬರಲು ಸಾಧ್ಯ. ಗ್ರಾಮೀಣ ಭಾಗದ ಪಟ್ಟೆ ವಿದ್ಯಾಸಂಸ್ಥೆಗಳು ಕಲಿಕೆಗೆ ಪೂರಕವಾದ ಸಲಕರಣೆಗಳನ್ನು ಕ್ರೂಢಿಕರಣ ಮಾಡಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಚಿಂತನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಪುತ್ತೂರು ರೋಟರಿ ಕ್ಲಬ್ ಯುವ ಇದರ ಅಧ್ಯಕ್ಷ ರೋ|ಪಶುಪತಿ ಮಾತನಾಡಿ, ವಿಜ್ಞಾನ ಪ್ರಯೋಗಾಲದ ಸೌಲಭ್ಯವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟೆ ವಿದ್ಯಾ ಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಬಿರ್ನೋಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶಿವಪ್ರಸಾದ್ ಪಟ್ಟೆ, ನಹುಷ.ಪಿ.ವಿ, ಶಿರೀಶ್ ಪಿ. ಬಿ, ಪುತ್ತೂರು ರೋಟರಿ ಕ್ಲಬ್ ಯುವ ಇದರ ಅಧ್ಯಕ್ಷ ರೋ|ಪಶುಪತಿ ಶರ್ಮ ಕೆ, ಅಸಿಸ್ಟೆಂಟ್ ಗವರ್ನರ್ ವಲಯ 5 ರೋ|ನರಸಿಂಹ ಪೈ, ಕಾರ್ಯದರ್ಶಿ ರೋ|ದೀಪಕ್.ಕೆ.ಬಿ ನಿಕಟಪೂರ್ವ ಅಧ್ಯಕ್ಷ ಡಾ|ಚೇತನ್ ಕುಮಾರ್, ಭರತ್ ಪೈ, ರೋ|ರಾಜೇಶ್ವರಿ ಆಚಾರ್, ವಲಯ ಸೇನಾನಿ ರೋ|ಝೆವಿಯರ್ ಡಿಸೋಜ, ನಿಯೋಜಿತ ಅಧ್ಯಕ್ಷ ರೋ|ಅಶ್ವಿನಿ ಕೃಷ್ಣ ಮುಳಿಯ, ಜತೆ ಕಾರ್ಯದರ್ಶಿ ರೋ|ವಿನಿತ್ ಶೆಣೈ, ನಿರ್ದೇಶಕ ರೋ|ನಿರೀಕ್ಷಿತ್, ವೀಕ್ಷಾ ಮತ್ತು ಪ್ರಾಥಮಿಕ ಶಾಲಾಮುಖ್ಯ ಶಿಕ್ಷಕ ರಾಜಗೋಪಾಲ್ ಉಪಸ್ಥಿತರಿದ್ದರು. ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕ ನಹುಷ ಪಿ.ವಿ ಅಭಿನಂದನಾ ಮಾತುಗಳನ್ಡಿನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸುಮನಾ ಸ್ವಾಗತಿಸಿ, ಭವಿತಾ ವಂದಿಸಿದರು. ಹತ್ತನೇ ತರಗತಿಯ ಮನುರಾಜ್ ಪ್ರಾರ್ಥಿಸಿದರು. ಸಹ ಶಿಕ್ಷಕ ವಿಶ್ವನಾಥ್ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲೆಯ ಎಲ್ಲಾ ಶಿಕ್ಷಕ ವರ್ಗದವರು ಸಹಕರಿಸಿದರು.