ಪುತ್ತೂರು: ಪಿಎಂಶ್ರೀ ಶಾಲೆ ವೀರಮಂಗಲದಲ್ಲಿ ಅಂತರರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಮುಖ್ಯಗುರು ತಾರಾನಾಥ ಸವಣೂರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿ, ಹೆಣ್ಣು ಒಂದು ಶಕ್ತಿ. ಹೆಣ್ಣು ತಾಯಿಯಾಗಿ ನಮ್ಮನ್ನು ಸಲಹುತ್ತಾಳೆ. ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಹೆಣ್ಣು ನಿರ್ವಹಿಸುವ ಪಾತ್ರಗಳು ಹಲವು. ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ, ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು, ಇಂತಹ ಲೋಕಮಾತೆಗೆ ಕೋಟಿ ನಮನಗಳು. ಹೆತ್ತು ಹೊತ್ತು ಸಾಕಿ ಸಲಹುವವಳು ಮಹಿಳೆ. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳು ಅವಳೇ, ಇಂತಹ ಮಹಿಳೆಗೆ ಜಗತ್ತಿನಲ್ಲಿ, ಅಪೂರ್ವ ಸ್ಥಾನವಿದೆ. ಎಂದು ಹೇಳಿದರು. ಶಿಕ್ಷಕಿಯರಾದ ಹರಿಣಾಕ್ಷಿ, ಶೋಭಾ, ಹೇಮಾವತಿ, ಶ್ರೀಲತಾ, ಕವಿತಾ ಶಿಲ್ಪರಾಣಿ, ಸೌಮ್ಯ ಅಕ್ಷರದಾಸೋಹ ಮುಖ್ಯ ಅಡುಗೆಯವರಾದ ಪಾರ್ವತಿ ಉಪಸ್ಥಿತರಿದ್ದರು.