ಪುತ್ತೂರು: ತಾಲೂಕು ಮುಖ್ಯಗುರುಗಳ ಸಂಘದ ಮಹಾಸಭೆಯು ನೆಲ್ಲಿಕಟ್ಟೆ ಶಾಲೆಯಲ್ಲಿ ನಡೆಯಿತು. ಮುಖ್ಯಗುರು ಸಂಘದ ಅಧ್ಯಕ್ಷೆ ಶುಭಲತಾ, ಪದಾಧಿಕಾರಿಗಳಾದ ತೆರೆಸಾ, ಚಂದ್ರಾವತಿ ಇವರು ನಿವೃತ್ತಿಗೊಂಡ ಕಾರಣ ಇವರ ಸ್ಥಾನಕ್ಕೆ ಉಪ್ಪಿನಂಗಡಿ ಮಾದರಿ ಶಾಲಾ ಮುಖ್ಯಗುರು ಹನುಮಂತಯ್ಯ, ಮುಂಡೂರು ಶಾಲೆಯ ಮುಖ್ಯಗುರು ವಿಜಯಾ, ಬಲ್ನಾಡು ಶಾಲೆಯ ಮುಖ್ಯಗುರು ಭವಾನಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ನಿಂಗರಾಜು ಇವರ ಉಪಸ್ಥಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪದಾಧಿಕಾರಿಗಳಿಂದ ಸರ್ವಾನುಮತದ ಆಯ್ಕೆಗೆ ಅವಕಾಶ ಮಾಡಿಕೊಡಲಾಯಿತು. ಈ ಪೈಕಿ ನೂತನ ಅಧ್ಯಕ್ಷರಾಗಿ ಹನುಮಂತಯ್ಯ ಇವರು ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಪದಾಧಿಕಾರಿಗಳಾಗಿ ಹಾಲಿ ಸದಸ್ಯರನ್ನು ಪುನರಾಯ್ಕೆ ಮಾಡಲಾಯಿತು. ಬೆಳ್ತಂಗಡಿ ಮುಖ್ಯಗುರುಗಳ ಸಂಘದ ಕಾರ್ಯದರ್ಶಿ ಹಾಗೂ ಜಿಲ್ಲಾ ಪದಾಧಿಕಾರಿ ಸುರೇಶ್ ಇವರು ಉಪಸ್ಥಿತರಿದ್ದು ಶುಭಹಾರೈಸಿದರು. ಏಪ್ರಿಲ್ 6 ರಂದು ಸಭೆ ಸೇರಿ ನಿವೃತ್ತ ಮುಖ್ಯಗುರುಗಳಾದ ತೆರೆಸಾ, ಶುಭಲತಾ ಮತ್ತು ಚಂದ್ರಾವತಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಿವೃತ್ತರಾಗುವ ನೀಲಾವತಿ ಪೆರ್ಲಂಪಾಡಿ ಇವರನ್ನು ಸನ್ಮಾನಿಸುವುದಾಗಿ ನಿರ್ಣಯಿಸಲಾಯಿತು. ಕಾರ್ಯದರ್ಶಿ ತಾರಾನಾಥ ಸವಣೂರು ಸ್ವಾಗತಿಸಿ ಯಶೋದಾ ಬೆಳ್ಳಿಪ್ಪಾಡಿ ವಂದಿಸಿದರು.