ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಮಹಾಶಿವರಾತ್ರಿ 3ನೇ ಮಖೆಕೂಟವು ಮಾ.9ರಂದು ಸಂಪನ್ನಗೊಂಡಿದ್ದು, ಈ ಸಂದರ್ಭ ಶ್ರೀ ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡಲಾಯಿತು.
ಪ್ರಾತಃಕಾಲದಲ್ಲಿ ತೀರ್ಥ ಸ್ನಾನ ನಡೆದು, ಬಳಿಕ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಸೇವೆಗಳು ನಡೆದವು. ಮಾ.15ರಂದು ನಡೆಯುವ ಶ್ರೀ ಮಹಾಕಾಳಿ ಅಮ್ಮನವರ ನೇಮಕ್ಕೆ ಈ ಸಂದರ್ಭ ಪಡಿಯಕ್ಕಿ ಕೊಡಲಾಯಿತು. ಬಳಿಕ ಮಹಾಪೂಜೆ ನಡೆದು, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತರು ಶ್ರೀ ದೇವರ ದರುಷನ ಪಡೆದರು.
ಈ ಸಂದರ್ಭ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಆರ್ತಿಲ ಕೃಷ್ಣ ರಾವ್, ವಿಶ್ವನಾಥ ಶೆಟ್ಟಿ ಕಂಗ್ವೆ, ಜಯಂತ ಪೊರೋಳಿ, ಹರಿರಾಮಚಂದ್ರ, ನ್ಯಾಯವಾದಿ ಮಹೇಶ್ ಕಜೆ, ಪ್ರಮುಖರಾದ ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ದೇವಿದಾಸ ರೈ ಅಡೆಕ್ಕಲ್, ಡಾ. ರಮ್ಯಾ ರಾಜಾರಾಂ, ರೂಪೇಶ್ ರೈ ಅಲಿಮಾರ್, ಕೃಷ್ಣಪ್ರಸಾದ್ ಭಟ್, ಡಾ. ಗೋವಿಂದ ಪ್ರಸಾದ್ ಕಜೆ, ವೆಂಕಪ್ಪ ಪೂಜಾರಿ ಮರುವೇಲು, ಪ್ರವೀಣ್ ಕದಿಕ್ಕಾರು ಬೀಡು, ಸುಧಾಕರ ಶೆಟ್ಟಿ ಕೋಟೆ ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣ ಪ್ರಸಾದ್, ದಿವಾಕರ, ಪದ್ಮನಾಭ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.