ದುಬೈ, ಅಬುದಾಬಿ ಲುಲು ಹೈಪರ್ ಮಾರ್ಕೆಟ್ ನಲ್ಲಿ ಉದ್ಯೋಗವಕಾಶಕ್ಕಾಗಿ ಹೆಚ್ಚಿದ ಬೇಡಿಕೆ

0

ಈಗಾಗಲೇ 500ಕ್ಕೂ ಮಿಕ್ಕಿ ಅಭ್ಯರ್ಥಿಗಳಿಗೆ ಉದ್ಯೋಗ | ಮಾರ್ಚ್ ಅಂತ್ಯದಲ್ಲಿ ನೇಮಕಾತಿ ಪ್ರಕ್ರಿಯೆ

ಪುತ್ತೂರು: ಏಷ್ಯಾದ ಅತೀ ದೊಡ್ಡ ಹೈಪರ್ ಮಾರ್ಕೆಟ್ ಸಂಸ್ಥೆಯಾಗಿರುವ ಮಂಗಳೂರಿನ ಲುಲು ಸಮೂಹ ಸಂಸ್ಥೆಯು ದುಬೈ, ಅಬುದಾಬಿ ಹೈಪರ್ ಮಾರ್ಕೆಟ್ ನಲ್ಲಿ ಯುವಕ-ಯುವತಿಯರಿಗೆ ಸಾವಿರಾರು ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಡುತ್ತಿದೆ. 2023ರ ನವೆಂಬರ್ ಹಾಗೂ 2024ರ ಫೆಬ್ರವರಿ ತಿಂಗಳಿನಲ್ಲಿ ಇದೇ ಸಂಸ್ಥೆಯು ಸುಮಾರು ,500ಕ್ಕೂ ಮಿಕ್ಕಿ ಅನೇಕ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ.

ಯುಎಇ, ಕತಾರ್, ಬಹರೈನ್, ಮಸ್ಕತ್, ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳನ್ನು ಒಳಗೊಂಡಂತೆ ಏಷ್ಯಾದ್ಯಂತ ‌ಇರುವ ಲುಲು ಸಂಸ್ಥೆ ಪ್ರಮುಖ ರಿಟೇಲ್ ಉದ್ಯಮ ಸಂಸ್ಥೆಯಾಗಿದೆ. ಸೇಲ್ಸ್, ಕೌಂಟರ್ ಸೇಲ್ಸ್, ಮತ್ತು ಕ್ಯಾಶಿಯರ್ ಜೊತೆಗೆ ವಿವಿಧ ಹುದ್ದೆಗಳು ಸಂಸ್ಥೆಯಲ್ಲಿದೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನೌಕರರಾಗಿ ಅನುಭವವಿರುವ ವೃತ್ತಿಪರರು ಮತ್ತು ಅನುಭವವಿಲ್ಲದವರು ಕೂಡ  ಅರ್ಜಿಯನ್ನು ಸಲ್ಲಿಸಬಹುದು. ಕನಿಷ್ಟ ವಿದ್ಯಾರ್ಹತೆ ಪಿಯುಸಿ. ಹುದ್ದೆಗಳಿಗೆ ವೇತನ ಶ್ರೇಣಿಯು 1200 ಯುಎಇ ಧಿರಾಮ್ ಗಳಿಂದ 1400 ದಿರಾಮ್ ತನಕ ಮತ್ತು 200 ದಿರಾಮ್ ಆಹಾರ ಭತ್ಯೆ ದೊರೆಯಲಿದೆ. ವಸತಿ, ವೀಸಾ, ವಿಮಾನ ಟಿಕೆಟ್ ವ್ಯವಸ್ಥೆಗಳನ್ನು ಸಂಸ್ಥೆಯು ನೋಡಿಕೊಳ್ಳುತ್ತಿದ್ದು ಸುಮಾರು 400 ಉದ್ಯೋಗವಕಾಶಗಳಿವೆ. ಆಭ್ಯರ್ಥಿಗಳು 21 ರಿಂದ 28 ವರ್ಷದವರಾಗಿದ್ದು ಆಂಗ್ಲ ಭಾಷೆಯಲ್ಲಿ ಉತ್ತಮ ಸಂವಹನ ಹೊಂದಬೇಕಾಗಿದೆ.

ಸಂದರ್ಶನ:
ಫೆರ್ನಾಂಡೀಸ್ ಗ್ರೂಪ್, ಮೆಟ್ರೊ ಪ್ಲಾಜಾ, 3ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲಿನ ಮಹಡಿ, ಮೋರ್ ಸೂಪರ್ ಮಾರ್ಕೆಟ್ ‌ಎದುರುಗಡೆ, ವಾಲೆನ್ಸಿಯಾ, ಮಂಗಳೂರು ಇಲ್ಲಿ ಸಂದರ್ಶನ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ:9686675464, 9686528447, 9686440571, 9686675465, 8904178833 ನಂಬರಿಗೆ ಸಂಪರ್ಕಿಸಬಹುದು ಎಂದು ಫೆರ್ನಾಂಡೀಸ್ ಗ್ರೂಪ್ ಸಂಸ್ಥೆಯ ಪ್ರವರ್ತಕ ವಿಲ್ಸನ್ ಫೆರ್ನಾಂಡೀಸ್ ಮಂಗಳೂರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ ಅಂತ್ಯದಲ್ಲಿ ನೇಮಕಾತಿ..
ಫೆಬ್ರವರಿ ಮೊದಲ ವಾರದಲ್ಲಿ ನೇಮಕಾತಿ ಸಂದರ್ಶನವನ್ನು ಸಂಸ್ಥೆಯು ಏರ್ಪಡಿಸಿದ್ದು ದ.ಕ ಜಿಲ್ಲೆಯ ಯುವಕ-ಯುವತಿಯರು ನೇರ ಸಂದರ್ಶನಕ್ಕೆ ಆಗಮಿಸಿ ಸಂಸ್ಥೆಯು ದುಬೈ, ಅಬುದಾಬಿ ಹೈಪರ್ ಮಾರ್ಕೆಟ್ ನಲ್ಲಿ ಉದ್ಯೋಗವಕಾಶಗಳಿಗೆ ನೇಮಕಾತಿ ನಡೆಸಿದ್ದು ಉತ್ತಮ ಸ್ಪಂದನೆಯು ದೊರೆತಿದೆ ಮಾತ್ರವಲ್ಲ ಅಭ್ಯರ್ಥಿಗಳು ಪ್ರಸ್ತುತ ವಿದೇಶದಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ ಅಲ್ಲದೆ ಮಾರ್ಚ್ ಅಂತ್ಯದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here