ಪುತ್ತೂರು: ಇಎಸ್ಆರ್ ಪ್ರೆಸಿಡೆನ್ಸಿ ಶಾಲೆ ಮರೀಲ್ ಇಲ್ಲಿ ಯುಕೆಜಿ ಪುಟಾಣಿಗಳ ಘಟಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ತಾಜುನ್ನಿಸಾರವರು ಘಟಿಕೋತ್ಸವದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇಎಸ್ಆರ್ ಶಾಲಾ ಸಂಚಾಲಕ ಝಾಕೀರ್ ಹುಸೇನ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪುಟಾಣಿಗಳು ಗ್ರ್ಯಾಜುವೇಷನ್ ಉಡುಗೆಯಲ್ಲಿ ಮಿಂಚಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕೂರ್ನಡ್ಕ ಮಸೀದಿಯ ಅಧ್ಯಕ್ಷ ಕಾಸಿಮ್ ಹಾಜಿ, ಆಡಳಿತ ಮಂಡಳಿಯ ಸದಸ್ಯರಾದ ಮಕ್ಸೂದ್ ಹಾಗೂ ವಿ. ಕೆ ಶರೀಫ್ ಹಾಗೂ ಪಿಡಿಎಂ ಅಧ್ಯಕ್ಷರಾದ ಸಿರಾಜ್ ಕೆ.ಎ ಹಾಗೂ ಉಪಾಧ್ಯಕ್ಷರಾದ ಶಾಹಿದ ಉಪಸ್ಥಿತರಿದ್ದರು. ಯುಕೆಜಿ ಪುಟಾಣಿಗಳಾದ ಮೊಹಮ್ಮದ್ ಝಿದಾನ್, ಮೊಹಮ್ಮದ್ ಶಮ್ಮಾಸ್, ಶಿಫಾ ಕದೀಜ, ಆಮಿನ ಝನ್ಹ, ರಿಂಶ ಫಾತಿಮಾ, ಮೊಹಮ್ಮದ್ ಅಹ್ನಾಫ್, ಮೊಹಮ್ಮದ್ ಹಾಝಿಮ್, ನಿಹಾಲ್ ಅಬ್ದುಲ್ಲಾ, ಇಶಲ್ ಫಾತಿಮಾ, ಐಫಾ ಫಾತಿಮಾ, ಶಝ್ನಾ ಫಾತಿಮಾ, ಮೊಹಮ್ಮದ್ ಇಝಾನ್ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಎರಡನೇ ತರಗತಿಯ ವಿದ್ಯಾರ್ಥಿಗಳಾದ ಆಮಿನ ಝಾಹ ಹಾಗೂ ಫಾತಿಮ ಆರಿಫ ಸ್ವಾಗತಿಸಿದರು.
ಒಂದನೇ ತರಗತಿಯ ವಿದ್ಯಾರ್ಥಿಗಳಾದ ಆಮಿನ ಮಾಹಾ ಅಲ್ತಾಫ್ ಹಾಗೂ ಫಾತಿಮಾ ಅಫ್ರಾರವರು ವಂದಿಸಿದರು. ಝಿಶಾನ್ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.