ಪುತ್ತೂರು:ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿ ನವರಾತ್ರಿ ಸಂಭ್ರಮದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರಕ್ಕೆ ಮೂವರು ವಿದೇಶಿಯರು ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಇಸ್ರೇಲ್‌ನ ನಿರ್, ಅಮೇರಿಕಾದ ಅಲೆಕ್ಸಾಂಡರ್ ಮತ್ತು ಜರ್ಮನಿಯ ಜೇನ್ನೆ ಎಂಬವರು ಸೆ.23ರಂದು ಶ್ರೀ ಶಾರದಾ ಭಜನಾ ಮಂದಿರಕ್ಕೆ ಭೇಟಿಯಿತ್ತರು. ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮತ್ತು ಇತರರು ವಿದೇಶಿಯರನ್ನು ಬರಮಾಡಿಕೊಂಡರು.