ನೆಲ್ಯಾಡಿ: ಶ್ರೀ ಕ್ಷೇತ್ರ ದೆಯ್ಯರ ಮಜಲು ದೈವಗಿರಿ, ಬೊಣ್ಯಸಾಗು ನೆಲ್ಯಾಡಿ ಇಲ್ಲಿ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಮಾ.12ರಿಂದ 14ರ ತನಕ ನಡೆಯಲಿದೆ.
ಮಾ.12ರಂದು ಬೆಳಿಗ್ಗೆ 9ಕ್ಕೆ ಹೊರೆಕಾಣಿಕೆ, ಉಗ್ರಾಣ ಮುಹೂರ್ತ, ಸಂಜೆ 5.30ಕ್ಕೆ ತಂತ್ರಿಗಳಿಗೆ ಸ್ವಾಗತ, 6ರಿಂದ ಪ್ರಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಪಾಲಬಲಿ, ಬಿಂಬಾಧಿವಾಸ ನಡೆಯಲಿದೆ. ಸಂಜೆ 7ರಿಂದ ಸ್ಥಳೀಯರಿಂದ ಹಾಗೂ ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರ ಕುಣಿತ ಭಜನಾ ತಂಡದವರಿಂದ ಭಜನೆ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಮಾ.13ರಂದು ಬೆಳಿಗ್ಗೆ 6ರಿಂದ ಗಣಹೋಮ, ಕಲಶಪೂಜೆ, ಬೆಳಿಗ್ಗೆ 10.14ಕ್ಕೆ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ನಡೆಯಲಿದೆ. ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ ಪಡುಬೆಟ್ಟು, ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಬಲ್ಯ, ಶ್ರೀ ಕಾಳಿಕಾಂಬ ಭಜನಾ ಮಂಡಳಿ ಬಲ್ಯ ಜಾಲ್ಮನೆ ಇವರಿಂದ ಭಜನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2ರಿಂದ ಶ್ರೀ ವಿನಾಯಕ ಯಕ್ಷಗಾನ ಮಂಡಳಿ, ರಾಮನಗರ ಬಲ್ಯ ನೆಲ್ಯಾಡಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಭೀಷ್ಮ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 5ರಿಂದ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ, ಶಿರಾಡಿ, ಬಚ್ಚನಾಯ್ಕ ಹಾಗೂ ಗುಳಿಗ ದೈವಗಳ ಭಂಡಾರ ಹಿಡಿದು ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಮಾ.14ರಂದು ಬೆಳಿಗ್ಗೆ ೬ರಿಂದ ಶಿರಾಡಿ ದೈವ, ಬಚ್ಚನಾಯ್ಕ ದೈವ, ಗುಳಿಗ ದೈವಗಳ ನೇಮೋತ್ಸವ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.