ಕಡಬ: ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ

0

ಸರಕಾರದ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿಯ ಬದುಕು ಕಾಣುತ್ತಿದ್ದಾರೆ: ದಿನೇಶ್ ಗುಂಡೂರಾವ್

ಕಡಬ: ರಾಜ್ಯ ಸರಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದೆ, ಇದರಿಂದಾಗಿ ರಾಜ್ಯದ ಮಹಿಳೆಯರ ಬದುಕು ಹಸನಾಗಿದೆ, ರಾಜ್ಯದ ಜನ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ ಎನ್ನುವುದು ಸುಳ್ಳು, ರಾಜ್ಯ ಸದೃಢವಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


ಅವರು ಮಾ.10ರಂದು ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಜನರ ಭಾವನೆಗಳನ್ನು ಕೆರಳಿಸಿ ಭಾಷಣ ಮಾಡುವುದು ಹಾಗೂ ಜಾತಿ-ಧರ್ಮಗಳ ಮಧ್ಯೆ ಕಂದಕ ನಿರ್ಮಿಸುವ ಭಾಷಣ ಮಾಡಿ ಮತ ಪಡೆಯುವುದು ಕೆಲವರಿಗೆ ಸುಲಭ. ಆದರೆ ಕಾರ್ಯಕ್ರಮ ಅನುಷ್ಟಾನ ಮಾಡುವುದು, ಸಮಾಜದಲ್ಲಿ ಬದಲಾವಣೆ ತರುವುದು ಕಷ್ಟದ ಕೆಲಸ, ನಮ್ಮ ಗ್ಯಾರಂಟಿ ಯೋಜನೆಗಳನ್ನು ಸದಾ ಟೀಕಿಸುವ ವಿರೋಧ ಪಕ್ಷಗಳು ನಾವು ಮಾಡಿರುವಂತಹ ಒಂದೂ ಕಾರ್ಯಕ್ರಮವನ್ನೂ ಮಾಡಿಲ್ಲ. ಬಿಜೆಪಿಯವರಿಗೆ ಯೋಜನೆಗಳನ್ನು ಮಾಡಿ ದುಡ್ಡು ಖರ್ಚು ಮಾಡಿದರೆ ಶೇ.40 ಪರ್ಸೆಂಟೇಜ್ ಸಿಗುತ್ತಿತ್ತು ಎಂದು ಆರೋಪಿಸಿದರು. ರಾಜ್ಯದಲ್ಲಿ ಬರಗಾಲವಿದೆ, ಕಾನೂನಾತ್ಮಕವಾಗಿ ರಾಜ್ಯಕ್ಕೆ ಸಿಗಬೇಕಾದ ಪರಿಹಾರವನ್ನು ಕೇಳಿದರೆ ಕೇಂದ್ರ ಕೊಡುತ್ತಿಲ್ಲ. ನಾವು ರಾಜ್ಯ ಸರಕಾರದಿಂದ ಬರಪೀಡಿತ ಪ್ರದೇಶದ ರೈತರ ಖಾತೆಗೆ ತಲಾ 2000 ರೂ.ನಂತೆ 700 ಕೋಟಿ ರೂ.ಕೊಟ್ಟಿದ್ದೇವೆ. ನಮ್ಮಿಂದ ಕೇಂದ್ರಕ್ಕೆ ನಾಲ್ಕು ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ, ಆದರೂ ನಮ್ಮ ಪಾಲನ್ನು ಕೊಡುತ್ತಿಲ್ಲ, ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.


ನುಡಿದಂತೆ ನಡೆದಿದ್ದೇವೆ: ಮಂಜುನಾಥ ಭಂಡಾರಿ:
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶದಲ್ಲಿ ಬಡವರ ಪರವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಕರ್ನಾಟಕದಲ್ಲಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ವಿರೋಧ ಪಕ್ಷದವರಂತೆ ಸುಳ್ಳು ಹೇಳಿ ಅಽಕಾರಕ್ಕೆ ಬಂದಿಲ್ಲ. ನಾವು ಏನು ಮಾಡಿದ್ದೇವೆ ಎನ್ನುವುದನ್ನು ಜನರಿಗೆ ತಿಳಿಸುವುದೇ ಈ ಸಮಾವೇಶದ ಉದ್ದೇಶವಾಗಿದೆ. ಸರಕಾರ ದಿವಾಳಿಯಾಗಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿರುವುದು ಅವರ ಹತಾಶ ಭಾವನೆಯಾಗಿದೆ, ಅವರ ಮನಸ್ಸಿನ ಸ್ಥೀತಿ ದಿವಾಳಿಯಾಗಿದೆ, ನಾವು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ ಎಂದರು.


ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ರಮನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಡಾ| ಆನಂದ್, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಎಚ್.ಬಿ., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಗದೀಶ್ ನಾಯಕ್, ಲೋಕೋಪಯೋಗಿ ಇಲಾಖೆಯ ಮಂಗಳೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಿ.ರಾಜಾರಾಂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂಜುಳಾ ಕಾಳೆ ಗೃಹಲಕ್ಷ್ಮಿ ಯೋಜನೆಯ, ಕಡಬ ಆಹಾರ ನಿರೀಕ್ಷಕ ಶಂಕರ್ ಎಂ.ಎನ್. ಅನ್ನ ಭಾಗ್ಯ ಯೋಜನೆಯ, ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ವ್ಯವಸ್ಥಾಪಕ ಇಸ್ಮಾಯಿಲ್‌ರವರು ಶಕ್ತಿ ಯೋಜನೆ, ಕಡಬ ಮೆಸ್ಕಾಂ ಲೆಕ್ಕಾಽಕಾರಿ ಕೃಷ್ಣಮೂರ್ತಿಯವರು ಗೃಹಜ್ಯೋತಿ, ಯುವಜನ ಇಲಾಖೆಯ ಪ್ರದೀಪ್ ಡಿಸೋಜರವರು ಯುವ ನಿಽಯ ಕಡಬ ತಾಲೂಕಿನ ವರದಿ ನೀಡಿದರು. ಪಂಚ ಗ್ಯಾರಂಟಿಯ -ಲಾನುಭವಿಗಳಾದ ಸುಲೋಚನಾ ಬೇಳ್ಪಾಡಿ, ಶೈಲಿ ಜೋನ್ಸನ್ ನೆಲ್ಯಾಡಿ, ಮಹಮ್ಮದ್ ಇಸ್ಮಾಯಿಲ್ ಕೊಯಿಲ, ಸುಶೀಲಾ ವೇಣುಗೋಪಾಲ್ ಬಿಳಿನೆಲೆ, ಸರೋಜಿನಿ ಶಶಿಧರ ಬೊಟ್ಟಡ್ಕ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿರು. ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ಭವಾನಿಶಂಕರ್ ಎನ್. ಸ್ವಾಗತಿಸಿ ಪ್ರಸ್ತಾವನೆಗೈದರು. ಭೂ ದಾಖಲೆಗಳ ನಿರ್ದೇಶಕಿ ಹಾಗೂ ಕಾರ್ಯಕ್ರಮದ ನೋಡೆಲ್ ಅಽಕಾರಿ ಪ್ರಸಾದಿನಿ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.

ಪಶು ಆಸ್ಪತ್ರೆ ಉದ್ಘಾಟನೆ:
ಸುಬ್ರಹ್ಮಣ್ಯ ಪಶು ಆಸ್ಪತ್ರೆಯ ನೂತನ ಕಟ್ಟಡವನ್ನು ಸಚಿವರು ಈ ವೇಳೆ ಉದ್ಘಾಟಿಸಿದರು. ಸುಬ್ರಹ್ಮಣ್ಯ ಸೇತುವೆ ಎತ್ತರಿಸುವ ಹಾಗೂ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆಯನ್ನೂ ಸಚಿವರು ಈ ಸಂದರ್ಭದಲ್ಲಿ ನೆರವೇರಿಸಿದರು.

LEAVE A REPLY

Please enter your comment!
Please enter your name here