ಎಂಎಸ್‌ಡಬ್ಲ್ಯೂ ಸ್ನಾತಕೋತ್ತರ ಪದವಿ – ಸ್ಮಿತಾಗೆ ಆರು ಚಿನ್ನದ ಪದಕ

0

ಉಪ್ಪಿನಂಗಡಿ: ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ ಸ್ಮಿತಾ ಎಂಬಾಕೆ ಮೈಸೂರು ವಿಶ್ವವಿದ್ಯಾನಿಲಯದ ಎಂಎಸ್‌ಡಬ್ಲ್ಯೂ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬೆದ್ರೋಡಿ ನಿವಾಸಿಯಾದ ಭರತ್ ಮತ್ತು ವಿಮಲಾ ದಂಪತಿಯ ಪುತ್ರಿಯಾಗಿರುವ ಸ್ಮಿತಾ, ಕಡು ಬಡತನದ ಸ್ಥಿತಿಯಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಶಾಲಾ ಜೀವನದಿಂದಲೇ ಗುರುತಿಸಿಕೊಂಡಿದ್ದು, ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್‌ಡಬ್ಲ್ಯೂ ಪದವಿ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿ ಗಮನ ಸೆಳೆದಿದ್ದರು. ಈಕೆಯ ಕಲಿಕಾ ಸಾಮರ್ಥ್ಯವನ್ನು ಮನಗಂಡು ಉಪ್ಪಿನಂಗಡಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಹಾಗೂ ಪ್ರಾಧ್ಯಾಪಕ ನಂದೀಶ್ ರವರು ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರ ಒದಗಿಸಿ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದರು. ದೊರಕಿದ ಸಹಕಾರವನ್ನು ಸದ್ಭಳಕೆ ಮಾಡಿರುವ ಸ್ಮಿತಾ ರವರು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲೂ ಗಮನಾರ್ಹ ಸಾಧನೆ ತೋರಿ ಬಡತನ ಕಲಿಕೆಗೆ ಅಡ್ಡಿಯಲ್ಲ ಎನ್ನುವುದನ್ನೂ ನಿರೂಪಿಸಿದ್ದಾರೆ.

LEAVE A REPLY

Please enter your comment!
Please enter your name here