





ಮತ್ತೊಬ್ಬರ ಮುಖದಲ್ಲಿ ಮಂದಹಾಸ ಮೂಡಿಸುವುದೇ ಆನಂದ – ಎಚ್.ಆರ್ ಕೇಶವ್


ಪುತ್ತೂರು: ನಂಬಿಕೆ ಇದ್ರೆ ಮೌನ ಸಹ ಅರ್ಥವಾಗುತ್ತದೆ, ನಂಬಿಕೆ ಇಲ್ಲದಿದ್ದರೆ ಪ್ರತಿ ಮಾತು ಅನರ್ಥವಾಗುತ್ತದೆ. ರೋಟರಿ ಫೌಂಡೇಶನ್ಗೆ ನೀಡುವ ದೇಣಿಗೆ ಅರ್ಹ ಫಲಾನುಭವಿಗೆ ಖಂಡಿತಾ ತಲುಪುತ್ತದೆ. ಈ ಮೂಲಕ ನಾವು ಮತ್ತೊಬ್ಬರ ಮುಖದಲ್ಲಿ ಮಂದಹಾಸ ಮೂಡಿಸಿದಾಗ ಅದರಷ್ಟು ಆಗುವ ಆನಂದ ಯಾವುದೂ ಇಲ್ಲ ಎಂದು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ರವರು ಹೇಳಿದರು.






ಮಾ.15ರಂದು ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರುಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಅವರು ಮರೀಲು ಹೊರ ವಲಯದಲ್ಲಿನ ದಿ ಪುತ್ತೂರು ಕ್ಲಬ್ನಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈರವರು ಕ್ಲಬ್ ಬುಲೆಟಿನ್ ‘ರೋಟ ರೆಕಾರ್ಡ್” ಅನಾವರಣಗೊಳಿಸಿ ಮಾತನಾಡಿ, ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ಈ ಪುತ್ತೂರು ಕ್ಲಬ್ ಸಮಾಜಕ್ಕೆ ಮಹತ್ತರ ಕೊಡುಗೆಯನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಕ್ಲಬ್ ಅನೇಕ ಕೊಡುಗೆಗಳನ್ನು ಸಮಾಜಕ್ಕೆ ನೀಡುವಂತಾಗಲಿ ಎಂದರು.
ರೋಟರಿ ವಲಯ ಸೇನಾನಿ ಝೇವಿಯರ್ ಡಿ’ಸೋಜ ಮಾತನಾಡಿ, ಕಳೆದ ಒಂಭತ್ತು ತಿಂಗಳು ಜಿಲ್ಲಾ ಗವರ್ನರ್ರವರ ಮಾರ್ಗದರ್ಶನದಲ್ಲಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿರವರ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದಾರೆ ಎಂದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಸ್ವಾಗತಿಸಿ ಮಾತನಾಡಿ, ಕ್ಲಬ್ ಸದಸ್ಯರ ಪ್ರಾಮಾಣಿಕ ಸಹಕಾರದಿಂದಾಗಿ ನಮಗೆ ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಈ ವರ್ಷದ ಧ್ಯೇಯವಾಕ್ಯ ಜಗತ್ತಿನಲ್ಲಿ ಭರವಸೆಯನ್ನು ಮೂಡಿಸು ಎಂಬಂತೆ ಪ್ರಾಮಾಣಿಕತೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಿ ಸಮಾಜದಿಂದ ಸಿಗುವ ಗೌರವ ಹಾಗೂ ಸಂತೃಪ್ತಿಯೇ ಬಹಳ ದೊಡ್ಡ ಮೌಲ್ಯವಾಗಿದೆ ಎಂದರು.
ನೂತನ ಸದಸ್ಯರ ಸೇರ್ಪಡೆ:
ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ, ವಿಜಯಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಹಾಗೂ ವಿವಿಧ ಕಡೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ದುಡಿದು ಪ್ರಸ್ತುತ ಉಪ್ಪಿನಂಗಡಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್ ಟಿ ರವರಿಗೆ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ರವರು ರೋಟರಿ ಪಿನ್ ತೊಡಿಸಿ ಸೇರ್ಪಡೆಗೊಳಿಸಲಾಯಿತು. ಕ್ಲಬ್ ಸರ್ವಿಸ್ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ನೂತನ ಸದಸ್ಯರ ಪರಿಚಯ ಮಾಡಿದರು.
ಟಿ.ಆರ್.ಎಫ್ ದೇಣಿಗೆ:
ಅಂತರ್ರಾಷ್ಟ್ರೀಯ ಸರ್ವಿಸ್ ವಿಭಾಗದಿಂದ ರೋಟರಿ ಫೌಂಡೇಶನ್ಗೆ ಟಿ.ಆರ್.ಎಫ್ ದೇಣಿಗೆ ನೀಡಿದ ಕ್ಲಬ್ ಸದಸ್ಯರಾದ ವಾಮನ್ ಪೈ, ಡಾ.ಶ್ಯಾಂ, ಅಜೇಯ್ ಪಡಿವಾಳ್, ಎ.ಜೆ ರೈ, ಕೇಶವ್ ಅಮೈ, ಜೈರಾಜ್ ಭಂಡಾರಿ, ಗೋಪಾಲಕೃಷ್ಣ ಸಾಯ, ಚಂದ್ರಶೇಖರ ರಾವ್, ನಟರಾಜ್, ಡಾ.ಜೆ.ಸಿ ಆಡಿಗ, ಡಾ.ನಝೀರ್ ಅಹಮದ್, ಸೀತಾರಾಮ ಭಟ್, ಕೃಷ್ಣಕುಮಾರ್ ರೈ, ಡಾ.ಶ್ರೀಪ್ರಕಾಶ್, ಡಾ.ಭಾಸ್ಕರ್ ಎಸ್, ಬಲರಾಂ ಆಚಾರ್ಯ, ದತ್ತಾತ್ರೇಯ ರಾವ್, ವಿ.ಜೆ ಫೆರ್ನಾಂಡೀಸ್ರವರುಗಳಿಗೆ ಜಿಲ್ಲಾ ಗವರ್ನರ್ರವರು ಅಭಿನಂದಿಸಿದರು. ಅಂತರ್ರಾಷ್ಟ್ರೀಯ ಸೇವಾ ನಿರ್ದೇಶಕ ವಿ.ಜೆ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾ ಪ್ರತಿಭೆಗೆ ನೆರವು:
ಯೂತ್ ಸರ್ವಿಸ್ ವತಿಯಿಂದ ಕಬಡ್ಡಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ, ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಪಿಎಡ್ ವ್ಯಾಸಂಗ ಮಾಡುತ್ತಿರುವ ಕು|ವಿನುಶ್ರೀರವರಿಗೆ ಪ್ರೋತ್ಸಾಹಧನದ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ಪರಮೇಶ್ವರ್ ಕಾರ್ಯಕ್ರಮ ನಿರೂಪಿಸಿದರು.
ಅಭಿನಂದನೆ:
ರಾಜ್ಯ ಹೆದ್ದಾರಿ ಮಂಗಳೂರು-ಸುಳ್ಯ ರಸ್ತೆಯಲ್ಲಿನ ಮುಕ್ರಂಪಾಡಿ ಎಂಬಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು, ಈ ಅಪಘಾತಗಳನ್ನು ತಪ್ಪಿಸಲು ರಸ್ತೆಗೆ ಝೀಬ್ರಾ ಕ್ರಾಸಿಂಗ್ ನೊಂದಿಗೆ ಸ್ಪೀಡ್ ಬ್ರೇಕರ್ ಅಳವಡಿಸಿ ಅಪಘಾತ ರಹಿತ ವಲಯವನ್ನಾಗಿ ಮಾಡಲು ಶ್ರಮಿಸಿದ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಇದರ ಜಿಲ್ಲಾ ಚೇರ್ಮ್ಯಾನ್ ಡಾ|ಹರ್ಷಕುಮಾರ್ ರೈ ಮಾಡಾವು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಸುರೇಶ್ ಪಿ.ರವರುಗಳನ್ನು ಅಭಿನಂದಿಸಲಾಯಿತು.

ಕ್ಲಬ್ ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಪಿ.ಬಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ಕ್ಲಬ್ನಲ್ಲಿನ ಸದಸ್ಯರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು. ಆನೆಟ್ ಪ್ರಾರ್ಥನಾ ಹಾಗೂ ಆರಾಧನಾ ಪ್ರಾರ್ಥಿಸಿದರು. ಟೀಚ್ ಚೇರ್ಮ್ಯಾನ್ ಸುರೇಶ್ ಶೆಟ್ಟಿ, ಸಾರ್ಜಂಟ್ ಅಟ್ ಆರ್ಮ್ಸ್ ಅಶೋಕ್ ಕುಮಾರ್ ಬಲ್ನಾಡು, ಎಂ.ಜಿ ರೈರವರು ವಿವಿಧ ಕಾರ್ಯ ನಿರ್ವಹಿಸಿದರು. ಕ್ಲಬ್ ಕಾರ್ಯದರ್ಶಿ ಸುಜಿತ್ ಡಿ.ರೈಯವರು ಎಲ್.ಇ.ಡಿ ಮೂಲಕ ವರದಿ ಮಂಡಿಸಿದರು. ಬುಲೆಟಿನ್ ಎಡಿಟರ್ ಬಾಲಕೃಷ್ಣ ಆಚಾರ್ಯ ಜಿಲ್ಲಾ ಗವರ್ನರ್ರವರ ಪರಿಚಯ ಮಾಡಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚೆಗೆ ಜೀವನದ 90 ವರ್ಷಗಳನ್ನು ಪೂರೈಸಿದ ಕ್ಲಬ್ ಸದಸ್ಯ ಅರಿಯಡ್ಕ ಚಿಕ್ಕಪ್ಪ ನಾೖಕ್, ರೋಟರಿ ಸದಸ್ಯರೂ ಆಗಿದ್ದು, ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿ ಕ್ಲಬ್ನ ಕಳೆದ 15 ವರ್ಷಗಳಲ್ಲಿ ಆಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಟರಾಜ್ ಎಂ.ಎಸ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆಯ ಮಡಿವಾಳಕಟ್ಟೆ ರುದ್ರಭೂಮಿಯನ್ನು ಕಳೆದ 15 ವರ್ಷಗಳಿಂದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪುತ್ತೂರಿನ ಹರಿಶ್ಚಂದ್ರ ಎಂದೇ ಗುರುತಿಸಿಕೊಂಡ ಎಂ.ಬಿ ಸತೀಶ್, ಓಜಾಲ ಸರಕಾರಿ ಶಾಲೆಯ ಈರ್ವರು ಅತಿಥಿ ಶಿಕ್ಷಕರಿಗೆ ವರ್ಷಕ್ಕೆ ರೂ.1.50 ಲಕ್ಷ ವೇತನಾ ದೇಣಿಗೆಯನ್ನು ನೀಡಿ ಸಹಕರಿಸಿದ ಕೃಷ್ಣ ಉದಯ ಭಟ್ರವರುಗಳನ್ನು ಸನ್ಮಾನಿಸಲಾಯಿತು. ರೋಟರಿ ಡಿಜಿ ಎಚ್.ಆರ್ ಕೇಶವ್ರವರನ್ನು ಬೆಳಿಗ್ಗೆ ಕುಂಬ್ರ ಜಂಕ್ಷನ್ನಲ್ಲಿ ಕ್ಲಬ್ ಪದಾಧಿಕಾರಿಗಳು ಸ್ವಾಗತಿಸಿದರು. ಬಳಿಕ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಿರ್ಮಾಣಗೊಂಡ ರಂಗಮಂದಿರದ ಉದ್ಘಾಟನೆ, ಅಧ್ಯಕ್ಷ ಜೈರಾಜ್ ಭಂಡಾರಿರವರ ನಿವಾಸ ಕುರಿಯ ಇಲ್ಲಿ ಉಪಹಾರ, ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ, ಬಲ್ನಾಡು ಮೊರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಶಾಲೆಗೆ ಭೇಟಿ, ಕುಡಿಪಾಡಿ ಅಂಗನವಾಡಿ ಕೇಂದ್ರಕ್ಕೆ ಭೇಟಿ, ರೋಟರಿ ಪುತ್ತೂರು ಕ್ಲಬ್ ಪ್ರಾಯೋಜಕತ್ವದ ರೋಟರಿ ಪುತ್ತೂರು ಕಣ್ಣಿನ ಆಸ್ಪತ್ರೆಗೆ ಭೇಟಿ, ಬೊಳ್ವಾರು ಮಹಾವೀರ ಸೆಂಟರ್ನಲ್ಲಿನ ಡಯಾಲಿಸಿಸ್ ಸೆಂಟರ್ಗೆ ಭೇಟಿ, ಅಪರಾಹ್ನ ಕ್ಲಬ್ ಅಸೆಂಬ್ಲಿಯಲ್ಲಿ ಭಾಗವಹಿಸಿ ಸಂಜೆ ದಿ ಪುತ್ತೂರು ಕ್ಲಬ್ನಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸ್ತನ ಕ್ಯಾನ್ಸರ್ ಕೇಂದ್ರಕ್ಕೆ ಸಹಾಯಹಸ್ತ..
ಪುತ್ತೂರಿನಲ್ಲಿ ಸ್ತನ ಕ್ಯಾನ್ಸರ್ ಕೇಂದ್ರ ಸ್ಥಾಪನೆಯಾಗಬೇಕು ಎನ್ನುವ ಯೋಜನೆ ಕ್ಲಬ್ ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್ರವರದ್ದು. ಈ ನಿಟ್ಟಿನಲ್ಲಿ ಡಾ.ಶ್ರೀಪತಿ ರಾವ್ರವರ ಕನಸಿಗೆ ಬೆನ್ನೆಲುಬಾಗಿ ನಿಂತದ್ದು ಮಾತ್ರವಲ್ಲ, ಆ ಯೋಜನೆಗೆ ರೂ.1.25 ಲಕ್ಷ ದೇಣಿಗೆ ನೀಡಿದ ಪಿಡಿಜಿ ಡಾ.ಭಾಸ್ಕರ್ ಎಸ್ ಹಾಗೂ ರೂ.2 ಲಕ್ಷ ದೇಣಿಗೆ ನೀಡಿದ ಪ್ರಗತಿಪರ ಕೃಷಿಕ, 85 ವರ್ಷ ವಯಸ್ಸಿನ ಅನಂತ್ ಭಟ್ ತಮಣ್ಣವರ್ರವರನ್ನು ಜಿಲ್ಲಾ ಗವರ್ನರ್ ಶಾಲು ಹೊದಿಸಿ ಅಭಿನಂದಿಸಿದರು.









