ಪುತ್ತೂರು ಪುಡಾ ಅಧ್ಯಕ್ಷ, ಸದಸ್ಯರ ಪದಗ್ರಹಣ – ಕಚೇರಿ ಉದ್ಘಾಟನೆ

0

ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿ, ಬ್ರೋಕರ್‌ಗಳಿಗೆ ಅವಕಾಶ ಕೊಡಬೇಡಿ- ಅಶೋಕ್ ಕುಮಾರ್ ರೈ

ಪುತ್ತೂರು: ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಮತ್ತು ಸದಸ್ಯರಾದ ರೈ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ್‌ನ ನಿಹಾಲ್ ಪಿ ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ನಗರಸಭೆ ಮಾಜಿ ಸದಸ್ಯ ಅನ್ವರ್‌ಕಾಸಿಂ ಅವರ ಅಧಿಕಾರ ಸ್ವೀಕಾರ ಮತ್ತು ಕಚೇರಿ ಉದ್ಘಾಟನೆ ಕಾರ್ಯಕ್ರಮ ಮಾ.16ರಂದು ಪುತ್ತೂರು ಪುಡಾ ಕಚೇರಿಯಲ್ಲಿ ನಡೆಯಿತು. ನಗರಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಶ್ ಎಂ ಅವರು ನೂತನ ಅಧ್ಯಕ್ಷ, ಸದಸ್ಯರಿಗೆ ಅಧಿಕಾರ ಚಲಾವಣೆಯ ಕುರಿತು ದಾಖಲೆ ಪತ್ರಗಳಿಗೆ ಸಹಿ ಪಡೆದರು.

ಕಚೇರಿಯ ದೀಪ ಪ್ರಜ್ವಲನೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುಡಾದಲ್ಲಿ ಸರಕಾರ ಮತ್ತು ಕಾನೂನಿನ ತೊಡಕುಗಳಿವೆ ಅದರಲ್ಲೂ ಪುಡಾದಲ್ಲೂ ತೊಂದರೆ ಇದೆ. ಜನರು ಇಲ್ಲಿಗೆ ಬಂದು ಅಲೆದಾಡುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಪುಡಾದ ನೂತನ ಅಧ್ಯಕ್ಷ ಮತ್ತು ಸದಸ್ಯರು ಇಲ್ಲಿಗೆ ಯಾರು ಬಡವ ಬಂದರೂ ಅವರ ಸಮಸ್ಯೆಯನ್ನು ಎಡೆಂಡ್ ಮಾಡುವ ಕೆಲಸ ಆಗಬೇಕು. ಬ್ರೋಕರ್‌ಗಳಿಗೆ ಅವಕಾಶ ಕೊಡುವುದನ್ನು ಕಡಿಮೆ ಮಾಡಿ. ಭ್ರಷ್ಟಾಚಾರ ರಹಿತವಾಗಿ ಪುಡಾ ಕೆಲಸ ಮಾಡಬೇಕು. ಜನರಿಗೆ ಉತ್ತಮ ಸ್ಪಂದನೆ ಸಿಗಬೇಕು. ಸಮಸ್ಯೆಗಳಿಗೆ ಕಾನೂನಿನಲ್ಲಿ ಅದಕ್ಕೆ ಉಪ ಕಾನೂನು ಇದ್ದೇ ಇರುತ್ತದೆ. ಕೆಲವು ಕಡೆ ಕನ್ವರ್ಷನ್, ಖಾತೆ ಮಾಡಲು ದೊಡ್ಡ ಸಮಸ್ಯೆ, ಕಾನೂನ್ನು ಉಲ್ಲಂಘನೆ ಮಾಡಿ ಕೊಡಿ ಎಂದು ಹೇಳುವುದಿಲ್ಲ. ಯಾವುದೇ ರೀತಿಯ ಮನೆ ಕಟ್ಟಲು ತೊಂದರೆ ಆಗದಂತೆ ಕಾನೂನಿನ ಚೌಕಟಿನಲ್ಲಿ ನೋಡಿ. ಕೆಲವೊಂದು ವಿಚಾರಗಳಿಗೆ, ಸಮಸ್ಯೆಗಳಿಗೆ ಸಂಬಂಧಿಸಿ ಮೂಡಬಿದ್ರೆ, ಮಂಗಳೂರು ತರದ ಕಾನೂನನ್ನು ಪುತ್ತೂರಿಗೆ ಅನ್ವಯ ಮಾಡಬೇಕು. ಇದಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ. ಅದನ್ನು ಸರಕಾರದಿಂದ ಮಾಡಿ ಕೊಡಿಸುವ ಕೆಲಸ ಮಾಡುತ್ತೇನೆ. ಬಡವರಿಗೆ ಸ್ಪಂದನೆ ಮಾಡುವಾಗ ಒಂದು ನಿಮಿಷ ಹಿಂದೆ ಮುಂದೆ ನೋಡಬೇಡಿ ಎಂದರು.

ಶಾಸಕರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ:
ಪುಡಾ ನೂತನ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಮಾತನಾಡಿ ಶಾಸಕರು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಬೇಕೆಂದು ಹೇಳಿದ್ದಾರೆ. ನಾನು ಇಲ್ಲಿ ತನಕ ಭ್ರಷ್ಟಾಚಾರ ಮಾಡಿಲ್ಲ. ಇನ್ನು ಮಾಡುವುದೂ ಇಲ್ಲ ಎಂಬ ಭರವಸೆ ನೀಡುತ್ತೇನೆ ಎಂದ ಅವರು ಈಗಾಗಲೇ ಕಟ್ ಕನ್ವರ್ಷನ್, ಸಿಂಗಲ್ ಲೇಔಟ್ ಸಮಸ್ಯೆಗಳನ್ನು ಸರಿ ಮಾಡಲು ಹಲವು ಮಂದಿಯ ಮನವಿ ಬಂದಿದೆ. ಕೆಲವರಿಗೆ ಪುಡಾ ಕಚೇರಿಗೆ ಹೋಗಿ ಬಂದಾಗ ಕಣ್ಣು, ಕಿವಿ, ಮೂಗಲ್ಲಿ ಬೆಂಕಿ ಬರುತ್ತದೆ ಎಂದು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಬೇಕು. ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶ. ಶಾಸಕರ ನಿರೀಕ್ಷೆಯಂತೆ ಜನರಿಗೆ ಸಹಾಯ ಮಾಡುವ ಉದ್ದೇಶ ನನಗೆ ಮತ್ತು ಮೂವರು ಸದಸ್ಯರಿಗೂ ಇದೆ. ನಮಗೆ ಸಾರ್ವಜನಿಕರ ಸಹಕಾರವೂ ಬೇಕಾಗಿದೆ ಎಂದರು.

ಈ ಸಂದರ್ಭ ಭಾಸ್ಕರ್ ಕೋಡಿಂಬಾಳ ಅವರ ಪತ್ನಿ ಉಪ್ಪಿನಂಗಡಿ ಪುಳೀತ್ತಡಿ ಸರಕಾರಿ ಶಾಲೆಯ ಶಿಕ್ಷಕಿ ಶುಭಲತಾ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಾರದಾ ಅರಸ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಅಮಳ ರಾಮಚಂದ್ರ, ಜೋಕಿಂ ಡಿಸೋಜ, ಜಿ.ಪಂ ಮಾಜಿ ಸದಸ್ಯ ಎಮ್.ಎಸ್ ಮಹಮ್ಮದ್, ಕೆಪಿಸಿಸಿಯ ಹೇಮನಾಥ ಶೆಟ್ಟಿ ಕಾವು, ಕಾಂಗ್ರೆಸ್ ಮುಖಂಡರಾದ ಅಮಳರಾಮಚಂದ್ರ, ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಎಂ.ಪಿ.ಅಬೂಬಕ್ಕರ್, ದೀಪಕ್ ಬೊಳುವಾರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷ ರಾಜಶೇಖರ್ ಜೈನ್, ಪ್ರಸಾದ್ ಕೌಶಲ್ ಶೆಟ್ಟಿ, ವಿಶಾಲಾಕ್ಷಿ ಬನ್ನೂರು, ಗಣೇಶ್ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here