





ಕಾಣಿಯೂರು: ಕುದ್ಮಾರು ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲದ ವತಿಯಿಂದ ವಿಶ್ವ ಮಹಿಳಾ ದಿನಚಾರಣೆಯ ಅಂಗವಾಗಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮಹಿಳಾ ಮಂಡಲದ ಉಪಾಧ್ಯಕ್ಷರಾದ ಭವಾನಿ ಉಳವ, ಉಮ್ಮಕ್ಕ ಅನ್ಯಾಡಿ ಸಾಧಕರನ್ನು ಸನ್ಮಾನಿಸಿದರು. ಮಹಿಳಾ ಮಂಡಲದ ಗೌರವಾಧ್ಯಕ್ಷೆ ರೇವತಿ ಕುದ್ಮಾರು, ಅಧ್ಯಕ್ಷೆ ಶುಭಾ ಆರ್ ನೋಂಡರವರು ಶುಭ ಹಾರೈಸಿದರು. ಸದಸ್ಯರಾದ ಉಮೇಶ್ವರಿ ಅಗಳಿ, ತಾರಾ ಅನ್ಯಾಡಿ ಸಾಧಕರ ಪರಿಚಯ ವಾಚಿಸಿದರು. ಕಾರ್ಯದರ್ಶಿ ಉಮಾಶ್ರೀ ಪ್ರಾರ್ಥಿಸಿದರು. ಸದಸ್ಯೆ ಜ್ಞಾನೇಶ್ವರಿ ಕುದ್ಮಾರು ಸ್ವಾಗತಿಸಿ, ಲಲಿತಾ ಈಶ್ವರ ವಂದಿಸಿದರು.



ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯರ ಕ್ರೀಡಾಕೂಟದ ರಾಷ್ಟ್ರ ಮಟ್ಟದ ಸಾಧಕಿ ಸುಶೀಲ ಪೆರ್ಲೋಡಿ ಮತ್ತು 2023ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 610 ಅಂಕ ಗಳಿಸಿದ ಭವಿಷ್ಯ ಅನ್ಯಾಡಿ ಅವರನ್ನು ಸನ್ಮಾನಿಸಲಾಯಿತು.













