ಬಾಲವನ ಸ್ವಿಮ್ಮಿಂಗ್ ಪೂಲ್ ನ ಬೇಸಿಗೆ ಶಿಬಿರಕ್ಕೆ ಭಾರಿ ಬೇಡಿಕೆ – ಇಂದೇ ರಿಜಿಸ್ಟ್ರೇಶನ್ ಮಾಡಿಕ್ಕೊಳ್ಳಿ!
ರಿಜಿಸ್ಟ್ರೇಶನ್ ಮಾಡ್ಕೊಳ್ಳೋದು ಹೇಗೆ? ಬ್ಯಾಚ್ ಗಳು ಹೇಗಿದೆ?- ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಪುತ್ತೂರು: ಬೇಸಿಗೆ ಬಂತೆಂದರೆ ನಮ್ಮ ದೇಹವನ್ನು ಕೂಲಾಗಿಟ್ಟುಕೊಳ್ಳುವುದೇ ಒಂದು ಸವಾಲು. ಇನ್ನು ಈಜಿನ ಕಲೆಯನ್ನು ಕಲಿಯುವುದು ನಮ್ಮ ಜೀವನದಲ್ಲಿ ಅತ್ಯವಶ್ಯಕವೂ ಆಗಿದೆ. ಇದಕ್ಕೆಲ್ಲ ಇದೀಗ ಒಂದು ಸುವರ್ಣಾವಕಾಶ ಒದಗಿ ಬಂದಿದೆ.ಪುತ್ತೂರಿನ ಬಿಸಿಲ ತಾಪಮಾನ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈಗಾಗಲೇ ಮಧ್ಯಾಹ್ನ ಸಮಯ ಬಿಸಿಲಿನ ತಾಪಮಾನ 40ಡಿಗ್ರಿ ದಾಟಿ ಮುಂದೆ ಸಾಗುತ್ತಿದೆ.ಬಾಲವನ ಸ್ವಿಮ್ಮಿಂಗ್ ಪೂಲ್ ನಲ್ಲಿ ಪ್ರತಿವರ್ಷ ನಡೆಸುವ ಬೇಸಿಗೆ ಶಿಬಿರಕ್ಕೆ ಈ ಭಾರಿ ಬೇಡಿಕೆ ಬಂದಿದೆ.
ಸುಡುವ ಬಿಸಿಲಿನಿಂದ ಹೆಚ್ಚೆಚ್ಚು ಜನ ಈಜಾಡಲು ಇಚ್ಚೆ ಪಡುತ್ತಿದ್ದು ಅದೇ ಈಜನ್ನು ನುರಿತ ತರಬೇತಿ ಪಡೆದವರಿಂದಲೇ ಈಜು ತರಬೇತಿ ಪಡೆಯುವ ಯೋಗ ಇದೀಗ ಪುತ್ತೂರಿನ ಜನತೆಗೆ ಲಭ್ಯವಾಗಿದೆ.ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಈಜು ಕೊಳದಲ್ಲಿ ವಿದ್ಯಾರ್ಥಿಗಳ ರಜೆಯ ಸಮಯದಲ್ಲಿ ಇದೇ ಎಪ್ರಿಲ್ 2 ರಿಂದ ಬೇಸಿಗೆ ಈಜು ಶಿಬಿರ ಪ್ರಾರಂಭವಾಗಲಿದೆ.
ಈಜು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಜನತೆಗೆ ಪುತ್ತೂರಿನ ಈ ಈಜು ಕೊಳ ವಿಶೇಷ ಆಫರ್ ನೀಡಿದ್ದು, ಈ ಬಾರಿ ಹಲವು ಬ್ಯಾಚ್ ಗಳನ್ನು ನಡೆಸಲಿದೆ.ಬೆಳಿಗ್ಗೆ 6.30 ರಿಂದ ಈಜು ತರಬೇತಿ ಶಿಬಿರ ಪ್ರಾರಂಭವಾಗೊಳ್ಳುತ್ತದೆ. 6.30 ರಿಂದ 7.15 ಕ್ಕೆ ಒಂದು ಬ್ಯಾಚ್ ನಂತರ 7.30 ರಿಂದ 8.15ಕ್ಕೆ ಒಂದು ಬ್ಯಾಚ್, 8.30 ರಿಂದ 9.15, 9.30-10.15 ನಂತರ ಮಧ್ಯಾಹ್ನ 2.30-3.15, 3.30-4.15, 4.30-5.15. ಸಂಜೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಮಾತ್ರ 5.30 ರಿಂದ 6.15 ರವರೆಗೆ ಒಂದು ಬ್ಯಾಚ್ ಇರಲಿದೆ. 6.30-7.15, 7.30-8.15ರವರೆಗೆ ಬ್ಯಾಚ್ ಇರಲಿದೆ.
ಪ್ಯಾಮಿಲಿ ಬ್ಯಾಚ್ ಮತ್ತು ಗ್ರೂಪ್ ಬ್ಯಾಚ್ ಗೆ ವಿಶೇಷ ರಿಯಾಯಿತಿ ಇರಲಿದೆ.ಇಲ್ಲಿ ನುರಿತ ತರಬೇತುದಾರರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಭಾರತೀಯ ನೌಕಸೇನೆ ಸೇರಿದಂತೆ ವಿವಿಧ ಕಡೆ ಉದ್ಯೋಗದಲ್ಲಿದ್ದು, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ಇಚ್ಚೆ ಇದ್ದವರು ಕೂಡಲೇ ಈ ನಂಬರ್ ಗಳಲ್ಲಿ ಬುಕ್ಕಿಂಗ್ ಮಾಡಿಕೊಳ್ಳಿ
ಪ್ರಫುಲ್ಲ : 9483919863
ಸೀತಾರಾಮ : 9743702470
ದೀಕ್ಷಿತ್ : 8904997518
ರೋಹಿತ್ : 8951097944