ನೆಲ್ಯಾಡಿ: ಇಲ್ಲಿನ ಜೇಸಿಐ, ಪ್ರಮುಖಿ ಮಹಿಳಾ ಮಂಡಲ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಹಯೋಗದೊಂದಿಗೆ ಕೊಲ್ಯೊಟ್ಟಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಕೊಪ್ಪ ಮಾದೇರಿ ಪ್ರಶಾಂತ್ ನಿಲಯ ಆಶ್ರಮದ ಮುಖ್ಯಸ್ಥೆ ಸಿ| ಸ್ಟ್ರೆಲ್ಲಾರವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ಜೆಸಿಐ ನೆಲ್ಯಾಡಿ ಘಟಕಾಧ್ಯಕ್ಷೆ ಸುಚಿತ್ರಾ ಜೆ ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿದ್ದರು. ಸ್ತ್ರೀಶಕ್ತಿ ಗುಂಪಿನ ಅಧ್ಯಕ್ಷೆ ಜಯಂತಿ ಬಂಟ್ರಿಯಾಲ್, ಮಹಿಳಾ ಜೆಸಿಐ ಅಧ್ಯಕ್ಷೆ ಲೀಲಾ ಮೋಹನ್, ಕೋಶಾಧಿಕಾರಿ ಸುಪ್ರೀತ ರವಿಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಕಳೆದ 40 ವರ್ಷಗಳಿಂದ ನಾಟಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಕೊಪ್ಪದ ಹಿರಿಯ ನಾಟಿ ವೈದ್ಯೆ ಲಿಂಗಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಪ್ರಮುಖಿ ಮಹಿಳಾ ಮಂಡಲದ ಸದಸ್ಯರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು, ನೆಲ್ಯಾಡಿ ಪೇಟೆ ಅಂಗನವಾಡಿ ಕಾರ್ಯಕರ್ತೆ ಕುಸುಮಾವತಿ, ಅಂಗನವಾಡಿ ಸಹಾಯಕಿ ಸುಜಾತ, ಅಂಗನವಾಡಿ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಕಾರ್ಯಕ್ರಮ ನಿರೂಪಿಸಿದರು. ನಮಿತಾ ಎಸ್ ಶೆಟ್ಟಿ ಸ್ವಾಗತಿಸಿ, ಶಾಂತಿ ವಂದಿಸಿದರು.