ಪುಣಚ: ಪುಣಚ ಶ್ರೀ ದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ, ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಮಾ.22ರಂದು ಜರುಗಿತು.
ಮುಖ್ಯ ಅತಿಥಿಯಾಗಿ ಪುಣಚ ಶ್ರೀ ದೇವಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿದ್ದ, ಪ್ರಸ್ತುತ ಬರಿಮಾರು ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲಾ ಶಿಕ್ಷಕಿ ಭವ್ಯ ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಪ್ರವೀಣ್ ಪ್ರಭು ಬೊಳ್ಳರಡ್ಕ, ಶ್ರೀದೇವಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರಜನಿ ಮಾತನಾಡಿ ಶುಭ ಹಾರೈಸಿದರು.
ಶಾಲಾ ಮಕ್ಕಳು ಸರಸ್ವತಿ ವಂದನೆಯನ್ನು ನೆರವೇರಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಗುರು ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ತಾರಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪ್ರಸನ್ನ ಕುಮಾರ್ ಧನ್ಯವಾದ ಗೈದರು. ಶಾಂತಿಮಂತ್ರದ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
ಮಾ.22ರಿಂದ ಆರಂಭಗೊಂಡು ಏ.3ರವರೆಗೆ 10 ದಿನಗಳ ಕಾಲ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಯೋಗ ಹೊರಸಂಚಾರ, ವೇದಗಣಿತ ಕಲಿಕೆ, ಗ್ರಾಮೀಣ ಕ್ರೀಡೆ, ಮಣ್ಣಿನ ಮಾದರಿಗಳ ತಯಾರಿಕೆ, ಕಲ್ಲಿನ ಮೇಲೆ ವಿನ್ಯಾಸ ರಚನೆ,ಚಿತ್ರಕಲೆ, ಕ್ರಾಫ್ಟ್,ಸಿಹಿ ಖಾದ್ಯ ತಯಾರಿಕೆ, ಕಂಪ್ಯೂಟರ್ ಕಲಿಕೆ, ಸಾಬೂನು ತಯಾರಿ ಇತ್ಯಾದಿ ಮನೋರಂಜನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.