ಉಪ್ಪಿನಂಗಡಿ: ಲೋಕಸಭಾ ಚುನಾವಣೆಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇಂದ್ರ ಮೀಸಲು ಪಡೆ (ಸಿಆರ್ಪಿಎಫ್) ಕಣ್ಗಾವಳಿಟ್ಟಿದ್ದು, ಉಪ್ಪಿನಂಗಡಿ ಪೇಟೆಯಲ್ಲಿ ಮಾ.23ರಂದು ಪಥ ಸಂಚಲನ ನಡೆಸಿತ್ತಲ್ಲದೆ, ಠಾಣಾ ವ್ಯಾಪ್ತಿಯ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳ ಮಾಹಿತಿಯನ್ನು ಕಳೆ ಹಾಕಿತ್ತು.
ಪಥ ಸಂಚನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನೀರಿಕ್ಷಕ ಬಿ.ಎಸ್. ರವಿ, ಎಸ್.ಐ. ಅವಿನಾಶ್, ಸಿ.ಆರ್.ಪಿ.ಎಫ್ ಅಜೇಯ ಕುಮಾರ್ ತಿವಾರಿ ಸಹಿತ ಸಿಆರ್ಪಿಎಫ್ ಸಿಬ್ಬಂದಿ, ಪೋಲಿಸರು ಪಥ ಸಂಚಲನದಲ್ಲಿ ಭಾಗವಹಿಸಿದರು.