ಭದ್ರಕಾಳಿ ಗುಡಿಯಲ್ಲಿ ವಿಶೇಷ ಪೂಜೆ, ಶಿರಾಡಿ ಗುಳಿಗ ದೈವಗಳ ನೇಮೋತ್ಸವ
ಆಲಂಕಾರು: ಸೀಮಾ ದೇವಸ್ಥಾನ ಶ್ರೀಕ್ಷೇತ್ರ ಶರವೂರು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಮಾ.14 ರಿಂದ ಮಾ.24 ರ ತನಕ ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಮಾ.23 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ, ಯಾತ್ರಾಹೋಮ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಆಲಂಕಾರು ಇವರ ಪ್ರಾಯೋಜಕತ್ವದಲ್ಲಿ ಸೌಪರ್ಣಿಕಾ ಮ್ಯೂಸಿಕ್ಸ್ ಕಡಬ ಇವರಿಂದ ಭಕ್ತಿರಸಮಂಜರಿ ಕಾರ್ಯಕ್ರಮ ನಡೆಯಿತು.ಸಾಯಂಕಾಲ ಅವಭೃತ ಮೆರವಣಿಗೆ, ಕಟ್ಟೆಪೂಜೆ, ಸನತಮೊಗರು ಕುಮಾರಧಾರೆಯಲ್ಲಿ ಅವಭೃತ, ಧ್ವಜಾವರೋಹಣ ನಡೆಯಿತು.
ಮಾ.24 ರಂದು ಬೆಳಿಗ್ಗೆ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ, ಶಿರಾಡಿ ಮತ್ತು ಗುಳಿಗ ದೈವಗಳ ನೇಮೋತ್ಸವ,ಮಧ್ಯಾಹ್ನ ಅಯ್ಯಪ್ಪ ಭಕ್ತವೃಂದ ಶರವೂರು, ಆಲಂಕಾರು, ರಾಮಕುಂಜ ಇವರಿಂದ ಗಂಜಿ ಊಟ ಸೇವೆ ನಡೆಯಿತು.
ಜಾತ್ರೋತ್ಸವಕ್ಕೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ,ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಊರ ಪರವೂರ ಭಕ್ತಾಧಿಗಳು ಜಾತ್ರೋತ್ಸವಕ್ಕೆ ಅಗಮಿಸಿ ಶ್ರೀ ದೇವಿಯ ಗಂಧ ಪ್ರಸಾದ ಹಾಗು ಸೇವೆಯಲ್ಲಿ ಪಾಲ್ಗೊಂಡರು. ಅಡಳಿತಾಧಿಕಾರಿ ಗೋಪಾಲ. ಕೆ ಯವರ ಉಪಸ್ಥಿತಿ ಯೊಂದಿಗೆ ಅರ್ಚಕ, ಸಿಬ್ಬಂದಿ ವರ್ಗ ಹಾಗು ಊರ ಹತ್ತು ಸಮಸ್ತರು ಹಾಗು ಭಕ್ತಾಧಿಗಳ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಮಾ.14 ರಿಂದ ಮಾ.24 ರ ತನಕ ವಿಜೃಂಭಣೆಯಿಂದ ಜರುಗಿತು.