
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮಾರಮಂಗಲ ಇಲ್ಲಿ ಇಲಾಖೆಯ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಸುತ್ತೋಲೆಯಂತೆ ಶಾಲೆಯಲ್ಲಿ ನೂತನ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆಯು ಮಾರ್ಚ್ 23 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ ಸವಣೂರು, ಉಪಾಧ್ಯಕ್ಷರಾಗಿ ರಾಮಕೃಷ್ಣ ವಿ ಯು ಕನ್ಯಾಮಂಗಲ, ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಕವಿತಾ ಎನ್, ಜತೆ ಕಾರ್ಯದರ್ಶಿಯಾಗಿ ಉಮೇಶ್.ಎಂ.ಬೇರಿಕೆ ಸವಣೂರು, ಕೋಶಾಧಿಕಾರಿಯಾಗಿ ಪುಟ್ಟಣ್ಣ ಬಂಬಿಲ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಬಾಳಪ್ಪ ಪೂಜಾರಿ ಬಂಬಿಲದೋಳ, ವಿಶ್ವನಾಥ ಕನ್ಯಾಮಂಗಲ, ಆನಂದ ಶೆಟ್ಟಿ ನೆಕ್ರಾಜೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶೀನಪ್ಪ ಶೆಟ್ಟಿ ನೆಕ್ರಾಜೆ, ರಮೇಶ ಕುಮಾರಮಂಗಲ, ಯೋಗೀಶ, ಸಾವಿತ್ರಿ ಕುಮಾರಮಂಗಲ, ರಶ್ಮಿತಾ, ರಂಜಿತ್ ನೆಕ್ರಾಜೆ, ರಮೇಶ ಪಂಚೋಡಿ, ಭೂಮಿತಾ ಬಾಳೆಹಿತ್ಲು, ರವಿ ಕನ್ಯಾಮಂಗಲ, ದಿನೇಶ್ ನೆಲ್ಲಿ, ಶೇಷಮ್ಮ ನೂಜಾಜೆ, ಉದಯ ನೂಜಾಜೆ, ನಾಗೇಶ್ ಕುಮಾರಮಂಗಲ, ಲೋಕೇಶ್ ಕನ್ಯಾಮಂಗಲ, ಕರುಣಾಕರ ಸಾರಕರೆ, ರಾಜೇಶ್ವರಿ ಕನ್ಯಾಮಂಗಲ, ಗಂಗಾಧರ ಕನ್ಯಾಮಂಗಲರವರುಗಳು ಆಯ್ಕೆಯಾಗಿದ್ದಾರೆ, ಸಭೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಂದರ ಕನ್ಯಾಮಂಗಲ, ಗ್ರಾಮ ಪಂಚಾಯತ್ನ ಸದಸ್ಯರುಗಳಾದ ಗಿರಿಶಂಕರ ಸುಲಾಯ, ,ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಹೇಮಲತಾ ಕುಮಾರಮಂಗಲ, ಅಂಗನವಾಡಿ ಕಾರ್ಯಕರ್ತೆ ಜಾನಕಿ, ಶಾಲಾ ಶಿಕ್ಷಕರಾದ ಶ್ಯಾಮ್ ಕೆ, ಸುಪ್ರಿಯ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಮೊದಲಾದವರು ಉಪಸ್ಥಿತದಿದ್ದರು. ಶಾಲಾ ಮುಖ್ಯಗುರುಗಳು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಕನ್ಯಾಮಂಗಲ ವಂದಿಸಿದರು.