ಮಾ.28ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ, ಏ.6ಕ್ಕೆ ಚುನಾವಣೆ
ಪುತ್ತೂರು: ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ 2024 -25 ರಿಂದ 2025-26ರ ಸಾಲಿನ 2 ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿಯ ಚುನಾವಣೆ ಏ.6ರಂದು ನಡೆಯಲಿದ್ದು, ಚುನಾವಣೆಗೆ ಸಂಬಂಧಿಸಿ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಕೋಶಾಧಿಕಾರಿ, ಜತೆ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮಾ.28ಕ್ಕೆ ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕವಾಗಿದ್ದು,ಈವರೆಗೆ ಮೂವರು ಅಧ್ಯಕ್ಷ ಮತ್ತು ಓರ್ವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಮಾ.22ರಿಂದ ನಾಮಪತ್ರ ಸಲ್ಲಿಕೆ ದಿನಾಂಕ ಆರಂಭಗೊಂಡಿದ್ದು, ಮಾ.28 ಸಂಜೆ ಗಂಟೆ 4 ರ ಒಳಗಡೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದ್ದು, ಮಾ.29ಕ್ಕೆ ಬೆಳಿಗ್ಗೆ ಗಂಟೆ 10ಕ್ಕೆ ಅರ್ಜಿ ಪರಿಶೀಲನೆ ನಡೆಯಲಿದೆ. ಎ.2ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಏ.6ಕ್ಕೆ ಮತದಾನವು ವಕೀಲರ ಸಂಘದ ಪರಾಶರ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 4ರ ತನಕ ನಡೆಯಲಿದೆ. ಅದೇ ದಿನ ಸಂಜೆ ಗಂಟೆ 4 ರಿಂದ ಮತ ಎಣಿಕೆಯು ನಡೆಯಲಿದೆ. ಈ ಎಲ್ಲಾ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿ ಚುನಾವಣಾಧಿಕಾರಿಗಳಾಗಿ ಕೆ.ಭಾಸ್ಕರ್ ಕೋಡಿಂಬಾಳ, ಎನ್ ಕಿಶೋರ್ ಕೊಳತ್ತಾಯ, ದೀಪಕ್ ಬೊಳುವಾರು ಅವರು ಕರ್ತವ್ಯ ನಿರ್ವಹಿಸಲಿದ್ದಾರೆ.
ನಾಲ್ವರಿಂದ ನಾಮಪತ್ರ ಸಲ್ಲಿಕೆ
ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಕೀಲರಾದ ಮಹೇಶ್ ಕಜೆ, ಜಿ.ಜಗನ್ನಾಥ ರೈ, ಸಂತೋಷ್ ಕುಮಾರ್ ಎಮ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಿಶ್ವನಾತ ನಂದಿಲ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.