ಪುತ್ತೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಪೂರ್ವಭಾವಿ ಸಭೆಯು ಮಾ.24 ರಂದು ದರ್ಬೆ ಅಶ್ವಿನಿ ಹೋಟೆಲ್ ಸಭಾಂಗಣದಲ್ಲಿ ಅಧ್ಯಕ್ಷ ಕರುಣಾಕರ್ ರೈ ದೇರ್ಲರವರ ಅಧ್ಯಕ್ಷತೆಯಲ್ಲಿ ಜರಗಿತು.
ಕಳೆದ ವರ್ಷ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಪ್ರಯುಕ್ತ ಯಕ್ಷಗಾನ ಪ್ರಸಂಗ ನೆರವೇರಿತ್ತು. ಈ ವರ್ಷವೂ ಯಕ್ಷಗಾನ ಪ್ರಸಂಗ ನೆರವೇರಲಿದ್ದು ಯಕ್ಷಧ್ರುವದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು, ಮಾತ್ರವಲ್ಲ ಆಮಂತ್ರಣ ಪತ್ರಿಕೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ಅಶ್ವಿನಿ ಹೊಟೇಲ್ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಅಧ್ಯಕ್ಷ ಕರುಣಾಕರ್ ರೈ ದೇರ್ಲರವರು ಸಭೆಯಲ್ಲಿ ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿರವರು ಮಾತನಾಡಿ, ಕಳೆದ ವರ್ಷ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಯಕ್ಷಧ್ರುವ ಪಟ್ಲ ಫೌಂಡೇಶನ್ ಜೊತೆಗೆ ಅಭೂತಪೂರ್ವ ಸಹಕಾರ ದೊರೆತಿದ್ದು, ಇದು ಪ್ರಸ್ತುತ ವರ್ಷವೂ ಮುಂದುವರೆಯಲಿ ಎಂದರು.
ಜಾತ್ರೆಗೆ ಯಕ್ಷಗಾನ/ಆಮಂತ್ರಣ ಪತ್ರಿಕೆ ಬಿಡುಗಡೆ;
ಏಪ್ರಿಲ್ ತಿಂಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ಏ.19 ರಂದು ಸಂಜೆ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರಸಂಗ ನಡೆಯಲಿದೆ. ಈ ಪ್ರಯುಕ್ತ ಏ.1 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ದರ್ಬೆ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ನೂತನ ಕೋಶಾಧಿಕಾರಿ ನೇಮಕ;
ಟ್ರಸ್ಟ್ನ ಕೋಶಾಧಿಕಾರಿಯಾಗಿ ಉದಯ ವೆಂಕಟೇಶ್ರವರು ಕಾರ್ಯದ ನಿಮಿತ್ತ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಅವರ ಜಾಗದಲ್ಲಿ ಪ್ರೊ|ದತ್ತಾತ್ರೇಯ ರಾವ್ರವರನ್ನು ಕೋಶಾಧಿಕಾರಿಯನ್ನಾಗಿ ನೇಮಿಸಲಾಯಿತು.
ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ರೈ ಬಿ.ರವರು ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಘಟಕದ ಸದಸ್ಯರಾದ ಎ.ಜೆ ರೈ, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಹರಿಣಾಕ್ಷಿ ಜೆ ಶೆಟ್ಟಿ, ಡಾ.ರಾಜೇಶ್ ಬೆಜ್ಜಂಗಳ, ಪ್ರೊ.ಸುಬ್ಬಪ್ಪ ಕೈಕಂಬ, ಎಂ.ಆರ್ ಜಯಕುಮಾರ್ ರೈ, ಗಣೇಶ್ ರೈ ಡಿಂಬ್ರಿ, ಅನ್ನಪೂರ್ಣ ಎಸ್.ಕೆ ರಾವ್, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಉದಯ ವೆಂಕಟೇಶ್, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲುರವರು ಭಾಗವಹಿಸಿದ್ದರು.