ಚಿಕ್ಕಮುಡ್ನೂರು ನೆಕ್ಕರೆ ದೈವಸ್ಥಾನದ ವಠಾರದಲ್ಲಿ ನೇಮೋತ್ಸವ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಶ್ರೀ ಬ್ರಹ್ಮ ಆದಿಮೊಗೇರ್ಕಳ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ದೈವಸ್ಥಾನದ ವಠಾರದಲ್ಲಿ ಸ್ಥಳದ ಗುಳಿಗ ದೈವದ ಹಾಗೂ ಚಾಮುಂಡೇಶ್ವರಿ, ಗುಳಿಗ, ಕಲ್ಲುರ್ಟಿ, ಪಂಜುರ್ಲಿ ಮತ್ತು ಗುಳಿಗ ಹಾಗೂ ಕಾರಣಿಕದ ಸ್ವಾಮಿ ಕೊರಗಜ್ಜ ದೈವಗಳ ನೇಮೋತ್ಸವವು ಮಾ.23 ಮತ್ತು ಮಾ.24ರಂದು ವೇದಮೂರ್ತಿ ಶ್ರೀಧರ ಭಟ್ ಕಬಕರವರ ಪೌರೋಹಿತ್ಯದಲ್ಲಿ ನಡೆಯಿತು.


ಮಾ.23ರಂದು ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿ ಹೋಮ, ಸಾನಿಧ್ಯಗಳಿಗೆ ಕಲಶ ಅಭಿಷೇಕ, ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ಚಾಮುಂಡೇಶ್ವರೀ ಅಮ್ಮನವರಿಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಗೊನೆ ಮುಹೂರ್ತ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಳದ ಗುಳಿಗ ದೈವದ ನೇಮೋತ್ಸವ, ರಾತ್ರಿ ಚಾಮುಂಡೇಶ್ವರಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆಯುವುದು, ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಚಾಮುಂಡೇಶ್ವರಿ ಮತ್ತು ಗುಳಿಗ ನೇಮೋತ್ಸವ, ಕಲ್ಲುರ್ಟಿ, ಪಂಜುರ್ಲಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಿತು. ಮಾ.೨೪ರಂದು ಬೆಳಿಗ್ಗೆ ಕಲ್ಲುರ್ಟಿ, ಪಂಜುರ್ಲಿ ದೈವಗಳು ಹಾಲು ಕುಡಿಯುವುದು. ಬಳಿಕ ಕಾರಣಿಕದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಮಧ್ಯಾಹ್ನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ಶ್ರೀ ಬ್ರಹ್ಮ ಆದಿಮೊಗೇರ್ಕಳ ಮತ್ತು ಶ್ರೀ ಚಾಮುಂಡೇಶ್ವರೀ ಅಮ್ಮನವರ ಸೇವಾ ಸಮಿತಿಯ ಅಧ್ಯಕ್ಷ ರವಿ ಮುಕ್ವೆ ಬದಿನಾರುಕಟ್ಟೆ, ಗೌರವಾಧ್ಯಕ್ಷ ಶ್ರೀಧರ ಪೂಜಾರಿ ನೆಕ್ಕರೆ, ಅನುವಂಶಿಕ ಮೊಕ್ತೇಸರ ಬಾಬು ಎನ್ ನೆಕ್ಕರೆ, ಉಪಾಧ್ಯಕ್ಷ ಶಿವರಾಮ ಪೆರ್ನೆ, ಕಾರ್ಯದರ್ಶಿಗಳಾದ ರವಿ ಬೆಳ್ಳಿಪ್ಪಾಡಿ ನೆಕ್ಕರೆ ಮತ್ತು ಲಲಿತಾ ಎನ್, ಕೋಶಾಧಿಕಾರಿ ವಾಸು ಕೇಪುಳು, ಸಮಿತಿಯ ಸದಸ್ಯರುಗಳಾದ ಜನಾರ್ಧನ ಪೂಜಾರಿ ಬೆಳ್ತಂಗಡಿ, ಮಾಧವ ನೆಕ್ಕರೆ, ಶ್ರೀನಿವಾಸ ನೆಕ್ಕರೆ, ನೇಮೋತ್ಸವದ ಉಸ್ತುವಾರಿ ಸದಸ್ಯರುಗಳಾದ ಕಿರಣ್ ಕೊರಜ್ಜಿಮಜಲು, ಬಾಲಕೃಷ್ಣ ಕೊರಜ್ಜಿಮಜಲು, ಜಯರಾಮ ಪೂಜಾರಿ ರಾಗಿದಕುಮೇರು, ರಾಜೀವ ಗೌಡ ನೆಕ್ಕರೆ, ಜಯಂತ ಕೊರಜ್ಜಿಮಜಲ್, ಸುಪ್ರೀತ್ ಕೊರಜ್ಜಿಮಜಲ್, ವೇಣುಗೋಪಾಲ ಕೊರಜ್ಜಿಮಜಲ್, ವಸಂತ ಕೊರಜ್ಜಿಮಜಲ್, ಪ್ರಕಾಶ್ ಆರ್ಯಮುಗೇರು, ರವಿ ಕೊರಜ್ಜಿಮಜಲ್, ಹರೀಶ್ ಗುಂಡಿಕಂಡ, ಜಗದೀಶ್ ಪಂಚವಟಿ, ರಾಮಣ್ಣ ಪೂಜಾರಿ ಕೂಡಮರ, ಆಶಾ ಆರ್ಯಮುಗೇರು, ಪುಷ್ಪ ನೆಕ್ಕರೆ, ವಿಮಲ ಆರ್ಯಮುಗೇರು, ಕಿಟ್ಟಣ್ಣ ಪೂಜಾರಿ ಕೂಡಮರ, ವಸಂತ ನಾಕ್ ನೆಕ್ಕರೆ, ಪ್ರಸಾದ್ ಕೊರಜ್ಜಿಮಜಲ್, ತೇಜಸ್ ಕೊರಜ್ಜಿಮಜಲ್, ಪ್ರಸಾದ್ ಕಂಜಲಗುರಿ, ಹರೀಶ್ ಗೌಡ ನೆಕ್ಕರೆ, ನವೀನ್ ಕೊರಜ್ಜಿಮಜಲ್, ಲೋಕೇಶ್ ಮಣಿಯ, ಗಂಗಾಧರ ಗೌಡ ಕ್ಯಾಂಪ್ಕೋ, ಜಯರಾಮ ಕುಲಾಲ್ ನೆಕ್ಕರೆ, ಭವ್ಯ ಆರ್ಯಮುಗೇರು, ಗಿರಿಜ ಕಂಚಲಗುರಿ, ಚಿತ್ರಾ ನೆಕ್ಕರೆ ಅಂಗಡಿ, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here