ಪುತ್ತೂರು: ಕೃಷಿ ಸಂಬಂಧಿಸಿದ ವಸ್ತುಗಳು ಸೇರಿದಂತೆ ಮನೆಗೆ ಬೇಕಾದ ವಸ್ತುಗಳ ಮಾರಾಟ ಮಳಿಗೆ ಸನ್ನಿಧಿ ಹಾರ್ಡ್ವೇರ್ಸ್ ಅಂಗಡಿಯನ್ನು ಪೆರ್ಲಂಪಾಡಿಯಲ್ಲಿ ತನ್ನದೇ ಕಟ್ಟಡದಲ್ಲಿ ಆರಂಭಿಸುವ ಮೂಲಕ ಬೆಳೆಯುತ್ತಿರುವ ಪೇಟೆಗೆ ತನ್ನ ಕೊಡುಗೆಯನ್ನು ನೀಡಿ ಗುಡ್ಡಪ್ಪ ಗೌಡರವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಇಂತಹ ಅಂಗಡಿಗಳಿಗೆ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕಾದ ಅಗತ್ಯತೆ ಇದೆ ಎಂದು ತಾಪಂ ಮಾಜಿ ಸದಸ್ಯ ಕೆಮ್ಮಾರ ಗಂಗಾಧರ ಗೌಡರವರು ಹೇಳಿದರು.
ಅವರು ಪೆರ್ಲಂಪಾಡಿಯಲ್ಲಿರುವ ಸನ್ನಿಧಿ ಸಂಕೀರ್ಣದಲ್ಲಿ ಸನ್ನಿಧಿ ಹಾರ್ಡ್ವೇರ್ಸ್ ಮಳಿಗೆಯನ್ನು ದೀಪ ಬೆಳಗಿಸುವ ಮೂಲಕ ಮಾ.27ರಂದು ಉದ್ಘಾಟಿಸಿ ಶುಭ ಹಾರೈಸಿದರು. ಗುಡ್ಡಪ್ಪ ಗೌಡರವರು ವ್ಯಾಪಾರದಲ್ಲಿ ಅನುಭವ ಹೊಂದಿದವರಾಗಿದ್ದು ಅವರ ಈ ಸಂಸ್ಥೆ ಕೂಡ ಯಶಸ್ವಿಯನ್ನು ಕಾಣಲಿ ಎಂದು ಗಂಗಾಧರ ಗೌಡರವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢ ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಕೊಳ್ತಿಗೆ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಶ್ಯಾಮ್ಸುಂದರ ರೈ, ಕುಟುಂಬದ ಹಿರಿಯರಾದ ಮೋನಪ್ಪ ಗೌಡ ನಾಡೋಳಿ, ವರ್ತಕರ ಸಂಘದ ಅಧ್ಯಕ್ಷ ವೆಂಕಟ್ರಮಣ ಆಚಾರ್ಯರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಗಿರಿಜ ಪ್ರಾರ್ಥಿಸಿದರು. ಸನ್ನಿಧಿ ಹಾರ್ಡ್ವೇರ್ಸ್ ಮಾಲಕ ಗುಡ್ಡಪ್ಪ ಗೌಡ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶ್ವಿತ್ ಕೆ.ಜಿ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಅರ್ಚಕ ಶಶಿಧರ ಭಟ್ ಕೆಮ್ಮಾರ ಮತ್ತು ತಂಡದವರು ಲಕ್ಷ್ಮೀಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ ಚಾಲೆಪಡ್ಪು, ನಿವೃತ್ತ ಮುಖ್ಯಗುರು ಲಕ್ಷ್ಮಣ ನಾಯ್ಕ್, ಕೊಳ್ತಿಗೆ ಫಾರೆಸ್ಟರ್ ಸೌಮ್ಯ, ಗೇರು ನಿಗಮದ ಮಾಜಿ ಅಧ್ಯಕ್ಷ ಕುಂಟಿಕಾನ ಲಕ್ಷ್ಮಣ ಗೌಡ, ಉದ್ಯಮಿ ವೀರಪ್ಪ ಗೌಡ ಪೆರ್ಲಂಪಾಡಿ, ನಿವೃತ್ತ ಮುಖ್ಯಗುರು ವೀರಪ್ಪ ಮಾಸ್ತರ್, ಪಾಂಬಾರು ಟ್ರೇಡರ್ಸ್ ಮಾಲಕ ಉದ್ಯಮಿ ಪ್ರದೀಪ್ ಪಾಂಬಾರು, ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್.ವೆಂಕಟ್ರಮಣ ಗೌಡ,ಕೊಳ್ತಿಗೆ ಗ್ರಾಪಂ ಸದಸ್ಯ ಪವನ್ ಡಿ.ಜಿ ದೊಡ್ಡಮನೆ, ದಾಮೋದರ, ಜಯಲಕ್ಷ್ಮೀ, ಸಿಂಚನಾ, ಗಣಪಯ್ಯ, ಚಿರಾಗ್, ಚಿನ್ನಮ್ಮ ತಿಮ್ಮಪ್ಪ ಗೌಡ, ಸದಾನಂದ ಗರಡಿಮಜಲು, ಆನಂದ ಗೌಡ ಕಲ್ಮಕ್ಕಾರು, ತಮಿಳ್ ಶೇಖರ್, ಗಿರೀಶ್ ಪಾದೆಕಲ್ಲು, ಹರಿಪ್ರಸಾದ್ ಕುಂಟಿಕಾನ, ಗ್ರಾಪಂ ಸಿಬ್ಬಂದಿ ನಾಗೇಶ್ ಬೀರ್ಣಕಜೆ ಹಾಗೇ ಕೊಳ್ತಿಗೆ ಗ್ರಾಪಂ ಸಿಬ್ಬಂದಿ ವರ್ಗ ಪೆರ್ಲಂಪಾಡಿ ಸಿಎ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸಿಬ್ಬಂದಿ ವರ್ಗ, ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸನ್ನಿಧಿ ಹಾರ್ಡ್ವೇರ್ಸ್ ಹಾಗೂ ಸನ್ನಿಧಿ ಸಂಕೀರ್ಣದ ಮಾಲಕ ಗುಡ್ಡಪ್ಪ ಗೌಡ, ಜಯಲಕ್ಷ್ಮೀ ಕೆ.ಜಿ, ಅಶ್ವಿತ್ ಕೆ.ಜಿ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.
ಕೃಷಿ ಸಂಬಂಧಿಸಿದ ವಸ್ತುಗಳು ಲಭ್ಯ
ಸನ್ನಿಧಿ ಹಾರ್ಡ್ವೇರ್ಸ್ನಲ್ಲಿ ಕೃಷಿ ಸಂಬಂಧಿಸಿದ ಹಾರೆ, ಪಿಕ್ಕಾಸು ಸೇರಿದಂತೆ ಎಲ್ಲಾ ವಸ್ತುಗಳು ಲಭ್ಯವಿದೆ. ಅಲ್ಲದೆ ಮನೆ ಬಳಕೆಯ ಪ್ಲಾಸ್ಟಿಕ್ ಐಟಮ್ಗಳು, ಅಲ್ಯೂಮಿನಿಯಂ ಪಾತ್ರೆಗಳು, ಪೈಪು ಫಿಟ್ಟಿಂಗ್ಸ್ಗಳು ಲಭ್ಯವಿದೆ. ಗ್ರಾಹಕರು ಸಹಕರಿಸುವಂತೆ ಮಾಲಕರು ವಿನಂತಿಸಿಕೊಂಡಿದ್ದಾರೆ.
` ಕೃಷಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಎಲ್ಲಾ ವಿದಧ ಕೃಷಿ ಸಂಬಂಧಿಸಿದ ವಸ್ತುಗಳು, ಪೈಪು ಫಿಟ್ಟಿಂಗ್ಸ್ಗಳು, ಮನೆ ಬಳಕೆಯ ಪ್ಲಾಸ್ಟಿಕ್, ಅಲ್ಯೂಮಿಯಂ ಪಾತ್ರೆಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನಮ್ಮಲ್ಲಿ ಲಭ್ಯವಿದೆ. ಗ್ರಾಹಕರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.’
ಗುಡ್ಡಪ್ಪ ಗೌಡ, ಮಾಲಕರು ಸನ್ನಿಧಿ ಹಾರ್ಡ್ವೇರ್ಸ್ ಪೆರ್ಲಂಪಾಡಿ