ರಾಮಕುಂಜ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಧ್ವಜಾರೋಹಣ ಮಾ.29ರಂದು ರಾತ್ರಿ ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣದ ಬಳಿಕ ದೇವರ ಬಲಿ ಹೊರಟು ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಉಪಾಧ್ಯಕ್ಷರಾದ ಧರ್ಣಪ್ಪ ಗೌಡ ಕೊರಿಕ್ಕಾರು, ಪಾಂಡೇಲುಗುತ್ತು ಚಂದ್ರಹಾಸ ರೈ ಬುಡಲೂರು, ಮೋಹನದಾಸ ಶೆಟ್ಟಿ ಬಡಿಲ, ರಾಮಚಂದ್ರ ಏಣಿತ್ತಡ್ಕ, ರಾಜೀವ ಗೌಡ ಪೊಸಲಕ್ಕೆ, ರುಕ್ಮಯ ಪಲ್ಲಡ್ಕ, ದಾಮಣ್ಣ ಗೌಡ ಕಾಯರಟ್ಟ, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅಂಬಾ, ಕಾರ್ಯದರ್ಶಿಗಳಾದ ಶಾಂತರಾಮ ಬೇಂಗದಪಡ್ಪು, ಮದುಸೂದನ್ ಪೆರ್ಲ, ತಿಮ್ಮಪ್ಪ ಸಂಕೇಶ, ಸದಸ್ಯರಾದ ಬಾಲಕೃಷ್ಣ ನಾಯ್ಕ ಏಣಿತ್ತಡ್ಕ, ವನಜ ಪಲ್ಲಡ್ಕ, ಮೋಹಿನಿ ಪಾನ್ಯೇಲು, ಮುರಳಿಕೃಷ್ಣ ಕೆ.ಬಡಿಲ, ವಿನಯಕುಮಾರ್ ರೈ ಕೊಯಿಲ ಪಟ್ಟೆ, ಶ್ರೀರಾಮ ಕೆಮ್ಮಾರ, ಸಂಜೀವ ಗೌಡ ಕೊನೆಮಜಲು, ಅಭಿವೃದ್ಧಿ ಸಮಿತಿ ಸಲಹೆಗಾರರಾದ ಕೇಶವ ಅಮೈ ಕಲಾಯಿಗುತ್ತು, ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಪ್ರಧಾನ ಕಾರ್ಯದರ್ಶಿ ಚೇತನ್ ಆನೆಗುಂಡಿ, ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕಾರಗುಡ್ಡೆ, ಭವಾನಿಶಂಕರ್ ಪರಂಗಾಜೆ, ರಾಮ ನಾಯ್ಕ್ ಏಣಿತ್ತಡ್ಕ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಕಾರ್ಯಕಾರಿ ಸಮಿತಿ ಸದಸ್ಯರಾದ ವಿನೋದರ ಗೌಡ ಮಾಳ, ರಾಮಯ್ಯ ಗೌಡ ಬುಡಲೂರು, ಕೆ.ಎಸ್.ಬಾಲಕೃಷ್ಣ ಕೊಲ್ಯ, ಸುಭಾಸ್ ಶೆಟ್ಟಿ ಆರುವಾರ, ಸುಧೀಶ ಪಟ್ಟೆ ಪಲ್ಲಡ್ಕ, ದಿನೇಶ್ ಗೌಡ ಊರಾಜೆ, ಸುಂದರ ಕೋರಿಕ್ಕಾರು, ಲಕ್ಷ್ಮೀನಾರಾಯಣ ರಾವ್ ಆತೂರು, ಅಶೋಕ್ ಗೋಕುಲನಗರ, ಜೊತೆ ಕಾರ್ಯದರ್ಶಿಗಳಾದ ಉಮೇಶ್ ಸಂಕೇಶ, ಶಾಂತರಾಮ್ ಬೇಂಗದಪಡ್ಪು, ಹರೀಂದ್ರ ಊರಾಜೆ, ಸಚಿನ್ ಪಲ್ಲಡ್ಕ ಪಟ್ಟೆ, ಬೈಲುವಾರು ಸಮಿತಿ ಗ್ರಾಮ ಸಂಚಾಲಕರಾದ ಭವಿತ್‌ರಾಜ್ ಪಲ್ಲಡ್ಕ ಪಟ್ಟೆ, ಪ್ರವೀಣ್‌ರಾಜ್ ಕೆ.ಎಸ್.ಕೊಲ್ಯ, ಬೈಲುವಾರು ಸಮಿತಿ ಸಂಚಾಲಕರು, ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಪುತ್ತೂರು ಎಸ್‌ಆರ್‌ಕೆಯ ಕೇಶವ ಅಮೈ ಅವರ ಪ್ರಾಯೋಜಕತ್ವದಲ್ಲಿ ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ರಾತ್ರಿ ಎಸ್‌ಆರ್‌ಕೆ ಲ್ಯಾಡರ‍್ಸ್ ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ೮ನೇ ವರ್ಷದ ಕಲಾಸೇವೆಯ ಪ್ರಯುಕ್ತ ಕಾಪು ರಂಗತರಂಗ ಕಲಾವಿದರಿಂದ ’ಬುಡೆದಿ’ತುಳು ನಾಟಕ ಪ್ರದರ್ಶನಗೊಂಡಿತು.