ಉಪ್ಪಿನಂಗಡಿ: 2023-24ನೇ ಶೈಕ್ಷಣಿಕ ವರ್ಷದಲ್ಲಿಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸತತ 7ನೇ ಬಾರಿಗೆ ಶೇ.100ರ ಅತ್ಯುತ್ತಮ ಫಲಿತಾಂಶವನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಪರೀಕ್ಷೆ ಬರೆದ 66 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಅಖಿಲ ಟಿ.ಕೆ, ಕವನ ರಾವ್, ಪ್ರಾಪ್ತಿ ಪಿವಿ 589 ಅಂಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಖಿಲ ಟಿ.ಕೆ ಇವರು ಬಲ್ಯ ಗ್ರಾಮದ ಕುಶಲಪ್ಪ ಗೌಡ ಟಿ ಹಾಗೂ ಸರೋಜ ಕೆ ದಂಪತಿಯ ಪುತ್ರಿ, ಕವನರಾವ್ ಇವರು ಉರುವಾಲು ಗ್ರಾಮದ ಮನೋಹರ ರಾವ್ ಎ ಹಾಗೂ ಆಶಲತಾ ದಂಪತಿಗಳ ಪುತ್ರಿ, ಪ್ರಾಪ್ತಿ ಪಿ ವಿ ಇವರು ಪೆರಾಬೆ ಗ್ರಾಮದ ವೀರಪ್ಪ ಗೌಡ ಹಾಗೂ ನಳಿನಾಕ್ಷಿ ಕೆ ದಂಪತಿಯ ಪುತ್ರಿ.
ಅಫ್ರ- 577 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಉಪ್ಪಿನಂಗಡಿಯ ಅಬ್ದುಲ್ ಲತೀಫ್ ಕೆ.ಐ ಹಾಗೂ ಅಫ್ಸತ್ ಎಚ್ ಯು ದಂಪತಿಯ ಪುತ್ರಿ ಹಾಗೂ ಯಶ್ವಿತ್ ಕೆ 571 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇವರು ಕಣಿಯೂರು ಗ್ರಾಮದ ಮೋನಪ್ಪ ಗೌಡ ಹಾಗೂ ಮೋಹಿನಿ ಕೆ ದಂಪತಿಯ ಪುತ್ರಿ. ವಿದ್ಯಾರ್ಥಿಗಳ ಈ ಸಾಧನೆ ಪ್ರಶಂಸನೀಯವಾದುದು ಎಂದು ಪ್ರಾಂಶುಪಾಲ ಎಚ್. ಕೆ. ಪ್ರಕಾಶ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.