ಭಕ್ತರ ಪಾಲಿನ ಪಲ್ಲತ್ತಡ್ಕ ಮಾಡಾವು ಶ್ರೀ ಹೊಸಮ್ಮ ದೈವದ ನೇಮೋತ್ಸವ  ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಅನ್ನಸಂತರ್ಪಣೆ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ಶ್ರೀ ಹೊಸಮ್ಮದೈವಸ್ಥಾನ ಪಲ್ಲತ್ತಡ್ಕ ದಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವವು ಎ.5ರಂದು ನಡೆಯಿತು.

ಬೆಳಿಗ್ಗೆ ಶ್ರೀ  ಮಹಾಗಣಪತಿ ಹೋಮ, ಕಳಶ ಪೂಜೆ, ಶ್ರೀ ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳನ್ನು ತಂಬಿಲ, ಶ್ರೀ ವೆಂಕಟರಮಣ ದೇವರ ಸೇವೆ, ಮಧ್ಯಾಹ್ನ ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ವರ್ಷದಲ್ಲಿ ಎರಡು ಬಾರಿ ನಡೆಯುವ ತುಲಾಭಾರ ಸೇವೆಯು ಅಕ್ಕಿ,ಬೆಲ್ಲ ,ಸಕ್ಕರೆಯಿಂದ  ನಡೆಯಿತು. ಮಧ್ಯಾಹ್ನ  ಮಹಾಪೂಜೆ, ಪ್ರಸಾದ ವಿತರಣೆ,ಅನ್ನ ಸಂತರ್ಪಣೆ ನಡೆದು ,ರಾತ್ರಿ ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.  ನಂತರ ಹೊಸಮ್ಮ ದೈವದ ಭಂಡಾರ ತೆಗೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.ಆಕರ್ಷಕ ಸಡುಮದ್ದು ಕಾರ್ಯಕ್ರಮ ನಡೆದು ಶಿವರಾಮ ರೈ ಕೊಡಂಬು ಸಮಯ ಪ್ಯಾಲೇಸ್ ಪುಣೆ ಮತ್ತು ಮನೆಯವರ ಸೇವಾರ್ಥವಾಗಿ ಸುಮಾರು  ‌ಹತ್ತು ‌ಸಾವಿರಕ್ಕೂ ‌ಅಧಿಕ  ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಪ್ರದಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಜಯಂತ ನಡುಬೈಲು, ಅನುವಂಶಿಕ ಮುಖ್ಯಸ್ಥೆ ರಾಜೀವಿ ಪಲ್ಲತ್ತಡ್ಕ, ಕುಟುಂಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು. ನಂತರ ಶ್ರೀ ಹೊಸಮ್ಮ ದೈವದ ನೇಮೋತ್ಸವವು ಬಹಳ ವಿಜೃಭಂನೆಯಿಂದ ನಡೆದು ಭಕ್ತಾಧಿಗಳು ಗಂಧ-ಪ್ರಸಾದವನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here