ಪುತ್ತೂರು: ಸ್ಪಂದನಾ ಸಹಾಯನಿಧಿ ಸೇವಾ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಜನರಿಂದ..ಜನರಿಗೆ..ಜನರಿಗೋಸ್ಕರ ಎಂಬ ಧ್ಯೇಯದೊಂದಿಗೆ ಕಿಡ್ನಿ ವೈಫಲ್ಯ, ಅಂಧತ್ವ, ಕ್ಯಾನ್ಸರ್, ಬುದ್ದಿಮಾಂದ್ಯ ಇವುಗಳಿಂದ ಬಳಲುತ್ತಿರುವ ಹಾಗೂ ಆಯ್ದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ “ನೆರವಿನ ಹಸ್ತ” ಕಾರ್ಯಕಮವು ಏ.7ರಂದು ಪುತ್ತೂರು-ಬಪ್ಪಳಿಗೆ ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನೆರವೇರಿತು. ಸ್ಪಂದನಾ ಸಹಾಯನಿಧಿ ಸೇವಾ ಟ್ರಸ್ಟ್ ಅಧ್ಯಕ್ಷೆ ಸುಮಿತ್ರರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರತಿ ತಿಂಗಳು ದಾನಿಗಳ ನೆರವಿನಿಂದ ಫಲಾನುಭವಿಗಳಿಗೆ ಕಿಟ್ ನೀಡುವ ಮೂಲಕ ನೆರವಿನ ಹಸ್ತ ಚಾಚುತ್ತಾ ಬಂದಿದೆ. ನಮ್ಮೊಂದಿಗೆ ಸಹಕರಿಸಿದ ಸಹೃದಯಿ ದಾನಿಗಳಿಗೆ ಕೃತಜ್ಞತೆಗಳು ಎಂದರು.
ಸ್ಪಂದನಾ ಸಹಾಯನಿಧಿ ಸೇವಾ ಟ್ರಸ್ಟ್ ಸಂಚಾಲಕ ಅವಿನಾಶ್, ಕಾರ್ಯದರ್ಶಿ ರುಕ್ಮಯ, ಜೊತೆ ಕಾರ್ಯದರ್ಶಿ ಕಾವ್ಯ, ಸದಸ್ಯರಾದ ಅಮಿತಾ, ಶಾಂತಿ, ಚೈತ್ರ ಉಪಸ್ಥಿತರಿದ್ದರು. ಶಾಂತಿ ಪ್ರಾರ್ಥಿಸಿದರು. ಗೌರವಾಧ್ಯಕ್ಷ ಶಿವಶಂಕರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.
22 ಮಂದಿ ಫಲಾನುಭವಿಗಳು..
ಸ್ಪಂದನಾ ಸಹಾಯನಿಧಿ ಸೇವಾ ಟ್ರಸ್ಟ್ ಪ್ರತಿ ತಿಂಗಳು ಫಲಾನುಭವಿಗಳಿಗೆ ನೆರವಿನ ಹಸ್ತ ಚಾಚುತ್ತಿದ್ದು ಈ ಬಾರಿ 22 ಮಂದಿ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.