ಪುತ್ತೂರು:ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಮಾ.31ರಿಂದ ಏ.6 ರವರೆಗೆ ಕಡಬ ತಾಲೂಕಿನ ನೇಲ್ಯಡ್ಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಮಾ.6 ರಂದು ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ದೀಪ ಪ್ರಜ್ವಲಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಡ್ಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಘುನಾಥ್ ರೈ ವಹಿಸಿದ್ದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಮೀಕಾಂತ ರೈ ರಾಷ್ಟ್ರ ನಿರ್ಮಾಣದಲ್ಲಿ ನವ ಯುವಕರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮ ಬಿ. , ನೇಮಿರಾಜ ಪಲ್ಲೋಡಿ . ದೇವಿಪ್ರಸಾದ್ ಗೆಜ್ಜೆ ,ಹರ್ಷಿತ್ ಕಾರ್ಜ , ಸುರೇಶ್ ಎನ್ ಉಪಸ್ಥಿತರಿದ್ದರು. ಯೋಜನಾಧಿಕಾರಿ ನಿರಂಜನ್ ವಿ. ಮತ್ತು ಸಹಯೋಜನಾಧಿಕಾರಿಗಳದ ಸುಮಾ ಎಸ್ ಮತ್ತು ವೆಂಕಟ್ರಮಣ ಎನ್ ಉಪಸ್ಥಿತರಿದ್ದರು.