ಪಳ್ಳತ್ತಾರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ರಂಜಾನ್

0

ಕಾಣಿಯೂರು:ಈದ್ ಹಬ್ಬವು ನಮ್ಮ ಬಾಳಿಗೆ ಬೆಳಕಾಗಬೇಕು.ಯಾವುದೇ ಕಾರಣಕ್ಕೂ ಕುಟುಂಬ ಸಂಬಂಧ ಬೇರ್ಪಡಿಸಬಾರದು.ಇಸ್ಲಾಂ ಧರ್ಮವು ಕುಟುಂಬ ಸಂಬಂಧ ಬೆಸೆಯುವಿಕೆಗೆ ಬಹಳ ಪ್ರಾಧಾನ್ಯತೆ ನೀಡಿದೆ.ಪರಸ್ಪರ ವೈರಾಗ್ಯದಿಂದ ಕುಟುಂಬ ಸಂಬಂಧ ಬೇರ್ಪಟ್ಟಿದ್ದರೆ ಈದ್ ನ ದಿನದಂದು ಕುಟುಂಬಸ್ಥರ ಮನೆಗಳಿಗೆ ತೆರಳಿ ಕುಟುಂಬ ಸಂಬಂಧ ಗಟ್ಟಿಗೊಳಿಸಬೇಕೆಂದು ಪಳ್ಳತ್ತಾರು ಮಸೀದಿಯ ಖತೀಬರಾದ ಬಹು ಮುಷ್ತಾಕ್ ಕಾಮಿಲ್ ಸಖಾಫಿಯವರು ಹೇಳಿದರು.


ಅವರು ಎ 10 ರಂದು ಪಳ್ಳತ್ತಾರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈದ್ ನಮಾಝ್ ಹಾಗೂ ಖುತುಬಾ ಪಾರಾಯಣಕ್ಕೆ ನೇತೃತ್ವ ನೀಡಿ ಈದ್ ಸಂದೇಶ ನೀಡಿದರು.
ಬಳಿಕ ರಂಝಾನ್ ತಿಂಗಳ ತರಾವೀಹ್ ಎಂಬ ಪ್ರತ್ಯೇಕ ನಮಾಝಿಗೆ ತಪ್ಪದೇ ಹಾಜರಾದ ಮದ್ರಸ ವಿದ್ಯಾರ್ಥಿಗಳಿಗೆ ನುಸ್ರತ್ತುಲ್ ಇಸ್ಲಾಂ ಖುತುಬಿಯತ್ ಕಮಿಟಿ ವತಿಯಿಂದ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here