ಪಿಯುಸಿ ಫಲಿತಾಂಶ: ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜು ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಶೇ.100 ಫಲಿತಾಂಶ

0

ಪುತ್ತೂರು: 2023-24 ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ಪುತ್ತೂರು ಮುಕ್ರಂಪಾಡಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಒಟ್ಟು 76 ವಿದ್ಯಾರ್ಥಿನಿಯರು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ. ಕಲಾ ವಿಭಾಗದಲ್ಲಿ-17, ವಾಣಿಜ್ಯ ವಿಭಾಗದಲ್ಲಿ-38 ಮತ್ತು ವಿಜ್ಞಾನ ವಿಭಾಗದಲ್ಲಿ-21 ವಿದ್ಯಾರ್ಥಿನಿಯರು ಹಾಜರಾಗಿದ್ದು , 3 ವಿಭಾಗಗಳಲ್ಲಿ 100% ಫಲಿತಾಂಶ ಬಂದಿರುತ್ತದೆ. 17 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ, 50 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಮತ್ತು 2 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಕಾಲೇಜು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.


ಪವಿತ್ರ ಕಲಾ ವಿಭಾಗ 564
ಸುಪ್ರೀತಾ ವಾಣಿಜ್ಯ ವಿಭಾಗ 564
ವರ್ಷಾ ವಿಜ್ಞಾನ ವಿಭಾಗ 556
ಪ್ರತೀಕ್ಷಾ ವಾಣಿಜ್ಯ ವಿಭಾಗ 556
ಮೇಘನಾ ಎ ವಾಣಿಜ್ಯ ವಿಭಾಗ 554
ಸಾದಿಯಾ ಬಾನು ವಿಜ್ಞಾನ ವಿಭಾಗ 551
ಫಾತಿಮತ್ ಸಜಾ ವಾಣಿಜ್ಯ ವಿಭಾಗ 549
ಫಾತಿಮತ್ ಸುಹೈಲಾ ವಾಣಿಜ್ಯ ವಿಭಾಗ 548
ರಕ್ಷಿತಾ ವಿ.ಕೆ ವಿಜ್ಞಾನ 524
ಅಫೀಝಾ ವಾಣಿಜ್ಯ ವಿಭಾಗ 535
ಫಾತಿಮತ್ ಮುರ್ಶಿದಾ 545
ಝೌರಾ ಕಲಾ ವಿಭಾಗ 548
ನಾಝಿಯಾ ವಾಣಿಜ್ಯ ವಿಭಾಗ 511
ಶ್ರುತಿ ಐ ವಿಜ್ಞಾನ ವಿಭಾಗ 522
ಓಂರಕ್ಷಾ ವಿಜ್ಞಾನ ವಿಭಾಗ 521
ಖದೀಜತುಲ್ ಝಾಕಿಯಾ ವಾಣಿಜ್ಯ ವಿಭಾಗ 519
ಆಯಿಷತ್ ಸನಾ ವಾಣಿಜ್ಯ 514 ಅಂಕಗಳನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here