ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜುನಲ್ಲಿ ವಾಣಿಜ್ಯ ವಿಭಾಗದಲ್ಲಿ 100%, ಕಲಾ ವಿಭಾಗದಲ್ಲಿ 95℅ ಫಲಿತಾಂಶ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಮತ್ತು ಕಲಾವಿಭಾಗದಲ್ಲಿ 95 % ಫಲಿತಾಂಶ ಬಂದಿದೆ.


ವಾಣಿಜ್ಯ ವಿಭಾಗದಲ್ಲಿ ಒಟ್ಟು 11ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ತನುಶ್ರೀ-539, ತೀರ್ಥ-532, ಕೆ.ಅರ್ಚನಾ-529, ಮಹಿತಾ.ವಿ-512, ಅಂಕ ಪಡೆದು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಆರು ಜನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ಒಬ್ಬ ದ್ವಿತೀಯ ಶ್ರೇಣಿಯಲ್ಲಿ ಪಾಸಗಿರುತ್ತಾರೆ.

ಕಲಾ ವಿಭಾಗದಲ್ಲಿ ಒಟ್ಟು 19 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ಅಭಿಲಾಷ ಪಿ.ಡಿ-584, ಮಹಮ್ಮದ್ ಅಫ್ಹಲ್-544, ಮೈತ್ರಿ-536, ಪಲ್ಲವಿ-535, ಧನ್ಯ ಶ್ರೀ-522, ದೀಕ್ಷಾ-514 ಅಂಕಗಳನ್ನು ಪಡೆದು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಾಗೂ 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿಗಳಾದ ಈಶ್ವರ ಗೌಡ ಪಜ್ಜಡ್ಕ, ಆಡಳಿತ ಮಂಡಳಿಯ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಆಡಳಿತಾಧಿಕಾರಿ ಶ್ರೀಪತಿ ರಾವ್ ಮುಖ್ಯ ಗುರುಗಳಾದ ನವೀನ್ ರೈ, ಉಪನ್ಯಾಸಕ ವೃಂದದವರಿಗೆ ಹಾಗೂ ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ವೃಂದದವರು ಪ್ರಾಂಶುಪಾಲರಾದ ರೂಪ ಜೆ ರೈ ಯವರು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here