ಪುತ್ತೂರು: ಇತ್ತೀಚೆಗೆ ನಿಧನರಾದ ನಾಟಿವೈದ್ಯೆ ಪಡ್ಡಾಯೂರು ಮೂವಪ್ಪು ನಿವಾಸಿ ಅಪ್ಪಿಯವರಿಗೆ ಶ್ರದ್ಧಾಂಜಲಿ ಸಭೆಯು ಏ.8ರಂದು ಮೂವಪ್ಪು ನಿವಾಸದಲ್ಲಿ ನಡೆಯಿತು.
ನುಡಿ ನಮನ ಸಲ್ಲಿಸಿದ ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಮಾತನಾಡಿ, ಮೃತ ಅಪ್ಪಿಯವರು ಕಷ್ಟದ ದಿನಗಳಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದವರು. ಜವಾಬ್ದಾರಿಯನ್ನು ಪ್ರೀತಿಯಿಂದ ನಿರ್ವಹಿಸಿ ಎಲ್ಲರಿಗೂ ಪ್ರೆರಣೆಯಾಗಿದ್ದರು. ಉತ್ತಮ ನಾಟಿ ವೈದ್ಯೆಯಾಗಿದ್ದ ಅವರು ಯಾವುದೇ ಪ್ರಚಾರಕ್ಕೆ ಬಂದಿರಲಿಲ್ಲ. ಅವರು ರೋಟರಿ ಕ್ಲಬ್ನ ಜಿಲ್ಲಾ ಗವರ್ನರ್ನಿಂದ ಸನ್ಮಾನಿಸಲ್ಪಟ್ಟಿದ್ದರು. ಉತ್ತಮ ನಾಟಿ ವೈದ್ಯೆಯಾಗಿದ್ದ ಅಪ್ಪಿಯವರ ಹೆಸರನ್ನು ಉಳಿಸಲು ಅವರ ಮನೆ ಪಕ್ಕದಲ್ಲಿಯೇ ಔಷಧಿವನ ನಿರ್ಮಿಸಲಾಗಿದೆ. ಅವರು ಬಾಳಿ ಬದುಕಿದ ಜೀವನವೇ ಆದರ್ಶ. ಅದನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು. ಮೃತರ ಪುತ್ರ ಆನಂದ ಗೌಡ ಮೂವಪ್ಪು, ಸೊಸೆ ಕುಸುಮ, ಮೊಮ್ಮಕ್ಕಳಾದ ಹರ್ಷಿತ್ ಮೂವಪ್ಪು, ಸುಶ್ಮಿತಾ, ಶ್ರುತಿ, ಶಮಂತ್ ಏನೆಕಲ್ಲು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.