ಪಿಯು ಫಲಿತಾಂಶ- ಪುತ್ತೂರು ತಾಲೂಕಿನ ಕಾಲೇಜುಗಳ ವಿವರ

0

ಕಲಾ ವಿಭಾಗ-ವಿವೇಕಾನಂದದ ಪುರೋಹಿತ್ ಖುಷಿಬೆನ್ ರಾಜ್ಯದಲ್ಲಿ ತೃತೀಯ
ವಿಜ್ಞಾನ ವಿಭಾಗದಲ್ಲಿ ಅಂಬಿಕಾದ ವರುಣ್ ಎಂ.ರಾಜ್ಯದಲ್ಲಿ ಐದನೇ ಸ್ಥಾನ

ವಿಜ್ಞಾನ ವಿಭಾಗದಲ್ಲಿ ವಿವೇಕಾನಂದದ ನೇತ್ರಾ ಡಿ-6ನೇ, ಫಿಲೋಮಿನಾದ ಹಲೀಮತ್ ಶೈಮ-8ನೇ,ಪ್ರವನ್‌ಪೊನ್ನಪ್ಪ-10ನೇ, ತೆಂಕಿಲ ನರೇಂದ್ರ ಪ.ಪೂ.ಕಾಲೇಜಿನ ಭೂಮಿಕಾ-10ನೇ, ಫಿಲೋಮಿನಾದ ಪ್ರತೀಕ್ಷಾ ಡಿ.ಎಸ್.ಗೆ 11ನೇ ಸ್ಥಾನ

ಪುತ್ತೂರು:ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಮಾರ್ಚ್ನಲ್ಲಿ ನಡೆಸಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಹಲವು ಶಿಕ್ಷಣ ಸಂಸ್ಥೆಗಳು ಶೇ.ನೂರು ತೇರ್ಗಡೆ ಫಲಿತಾಂಶದ ಸಾಧನೆ ಮಾಡಿವೆ.ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಪುರೋಹಿತ್ ಖುಷಿಬೆನ್ ಅವರು 594 ಅಂಕಗಳೊಂದಿಗೆ ತಾಲೂಕಿನಲ್ಲಿ ಪ್ರಥಮ ಸ್ಥಾನ, ರಾಜ್ಯದಲ್ಲಿ ಮೂರನೇ ಸ್ಥಾನ ಹಾಗೂ ವಿಜ್ಞಾನ ವಿಭಾಗದಲ್ಲಿ ಅಂಬಿಕಾ ಪದವಿ ಪೂರ್ವ ಕಾಲೇಜಿನ ವರುಣ್ ಎಂ.ಅವರು 594 ಅಂಕಗಳೊಂದಿಗೆ ರಾಜ್ಯದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.ವಿವೇಕಾನಂದ ಪದವಿ ಪೂರ್ವ ಕಾಲೇಜಿನ ನೇತ್ರಾ ಡಿ.ಅವರು 592 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪಿ.ಹಲೀಮತ್ ಶೈಮ ಅವರು 591 ಅಂಕಗಳೊಂದಿಗೆ ರಾಜ್ಯದಲ್ಲಿ 8ನೇ ಸ್ಥಾನ ಹಾಗೂ ಪ್ರವನ್‌ಪೊನ್ನಪ್ಪ ಅವರು 589 ಅಂಕಗಳೊಂದಿಗೆ ರಾಜ್ಯದಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ತೆಂಕಿಲ ನರೆಂದ್ರ ಪ.ಪೂ.ಕಾಲೇಜಿನ ಭೂಮಿಕಾ ಅವರು 589 ಅಂಕಗಳೊಂದಿಗೆ ರಾಜ್ಯದಲ್ಲಿ 10ನೇ ಸ್ಥಾನ, ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಸಂತ ಫಿಲೋಮಿನಾ ಕಾಲೇಜಿನ ಪ್ರತೀಕ್ಷಾ ಡಿ.ಎಸ್. 588 ಅಂಕಗಳೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನ ಪಡೆದುಕೊಂಡಿದ್ದಾರೆ.

ಶೇ.ನೂರು ಫಲಿತಾಂಶ ಪಡೆದ ಕಾಲೇಜುಗಳು
ನೆಲ್ಲಿಕಟ್ಟೆ ಮತ್ತು ಬಪ್ಪಳಿಗೆ ಅಂಬಿಕಾ ಪ.ಪೂ.ಕಾಲೇಜು, ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು, ತೆಂಕಿಲ ನರೇಂದ್ರ ಪ.ಪೂ.ಕಾಲೇಜು ವಾಣಿಜ್ಯ ವಿಭಾಗ. ಉಪ್ಪಿನಂಗಡಿ ಇಂದ್ರಪ್ರಸ್ಥ ಪ.ಪೂ.ಕಾಲೇಜು ವಿಜ್ಞಾನ ವಿಭಾಗ,ವಿವೇಕಾನಂದ ಪ.ಪೂ.ಕಾಲೇಜು ಕಲಾ ವಿಭಾಗ, ಸವಣೂರು ವಿದ್ಯಾರಶ್ಮಿ ಸ್ವತಂತ್ರ ಪ.ಪೂ.ಕಾಲೇಜು, ಆತೂರು ಆಯಿಶಾ ಹೆಣ್ಮಕ್ಕಳ ಪ.ಪೂ.ಕಾಲೇಜು,ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜು, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ವಿಜ್ಞಾನ ವಿಭಾಗ, ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜು, ನೆಲ್ಯಾಡಿ ಸಂತ ಜಾರ್ಜ್ ಪ.ಪೂ.ಕಾಲೇಜು, ಕೆ.ಐ.ಸಿ. ಕುಂಬ್ರ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪ.ಪೂ.ಕಾಲೇಜು, ಆಲಂಕಾರು ದುರ್ಗಾಂಬಾ ಪ.ಪೂ.ಕಾಲೇಜು ವಾಣಿಜ್ಯ ವಿಭಾಗ. ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜು, ಕೊಣಾಲು ಸರಕಾರಿ ಪ.ಪೂ.ಕಾಲೇಜು.ಕಾಣಿಯೂರು ಸ.ಪ.ಪೂ.ಕಾಲೇಜು ವಾಣಿಜ್ಯ, ವಿಜ್ಞಾನ ವಿಭಾಗ.

ಡಿಸ್ಟಿಂಕ್ಷನ್ ವಿವರ:
ವಿವೇಕಾನಂದ ಪ.ಪೂ.-482, ಅಂಬಿಕಾ ಪ.ಪೂ.-308. ಸಂತ ಫಿಲೋಮಿನಾ-190.ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.-88.ವಿಟ್ಲ ವಿಠಲ ಪ.ಪೂ.ಕಾಲೇಜು-79.ಉಪ್ಪಿನಂಗಡಿ ಇಂದ್ರಪ್ರಸ್ಥ ಪ.ಪೂ.-52. ಉಪ್ಪಿನಂಗಡಿ ಸ.ಪ.ಪೂ.-40, ತೆಂಕಿಲ ನರೇಂದ್ರ ಪ.ಪೂ.-32.ನೆಲ್ಯಾಡಿ ಸಂತ ಜಾರ್ಜ್ ಪ.ಪೂ.ಕಾಲೇಜು-32, ಆತೂರು ಆಯಿಶಾ ಹೆಣ್ಮಕ್ಕಳ ಪ.ಪೂ. ಕಾಲೇಜು-26.ಕಾಣಿಯೂರು ಸ.ಪ.ಪೂ.ಕಾಲೇಜು-22.ಬೆಟ್ಟಂಪಾಡಿ ಸ.ಪ.ಪೂ.ಕಾಲೇಜು-21.ನೆಲ್ಯಾಡಿ ಜ್ಞಾನೋದಯ ಬೆಥನಿ-20.ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜು-17. ಕಡಬ ಸ.ಪ.ಪೂ ಕಾಲೇಜು-12, ಆಲಂಕಾರು ದುರ್ಗಾಂಬಾ ಪ.ಪೂ.ಕಾಲೇಜು-10.ವಿದ್ಯಾರಶ್ಮಿ ಸ್ವತಂತ್ರ ಪ.ಪೂ.ಕಾಲೇಜು ಸವಣೂರು-9, ಕೊಣಾಲು ಸ.ಪ.ಪೂ.ಕಾಲೇಜು-3, ಪ್ರಗತಿ ಸ್ಟಡಿ ಸೆಂಟರ್-1

LEAVE A REPLY

Please enter your comment!
Please enter your name here