ಪುತ್ತೂರು ಶಾರದೋತ್ಸವದ ಕ್ಷಣಗಳು… – ಇನ್‌ಸ್ಟಾಗ್ರಾಂ ರೀಲ್ಸ್ ವಿಜೇತರಿಗೆ ಬಹುಮಾನ ವಿತರಣೆ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 91ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವದ ಸಂದರ್ಭದಲ್ಲಿ ದೇವಿಯ ಶೋಭಾಯಾತ್ರೆಯ ಕುರಿತು ಇನ್‌ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ ಆಯೋಜಿಸಿದ್ದು, ವಿಜೇತರಾದವರ ಬಹುಮಾನ ವಿತರಣೆ ಕಾರ್ಯಕ್ರಮ ಅ.16ರಂದು ದರ್ಬೆ ಪದ್ಮಶ್ರೀ ಸೋಲಾರ್ ಸಿಸ್ಟಂನ ಕಚೇರಿಯಲ್ಲಿ ನಡೆಯಿತು.

1ನೇ ಬಹುಮಾನ


ರೀಲ್ಸ್ ನಲ್ಲಿ ಅತೀ ಹೆಚ್ಚು ವೀಕ್ಷಣೆ, ಲೈಕ್ಸ್ ಪಡೆದ ಬಪ್ಪಳಿಗೆಯ ರೋಹಿತ್ ಗೌಡ ಪ್ರಥಮ ಬಹುಮಾನವಾಗಿ ರೂ.10 ಸಾವಿರ ನಗದು, ಸ್ಮರಣಿಕೆ, ಪ್ರಮಾಣ ಪತ್ರ ಪಡೆದುಕೊಂಡರೆ, ದ್ವಿತೀಯ ಸ್ಥಾನ ಪಡೆದ ಅಶ್ವಿನಿ ಪವಿತ್ರ ಆಳ್ವ ರೂ.4000 ನಗದು, ಸ್ಮರಣಿಕೆ, ಪ್ರಮಾಣ ಪತ್ರ ಪಡೆದುಕೊಂಡರು.


ಭಜನಾ ಮಂದಿರದ ಅಧ್ಯಕ್ಷ, ಶೋಭಾಯಾತ್ರೆಯ ರೂವಾರಿ, ಉದ್ಯಮಿ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ನವೀನ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here