ಆಲಂಕಾರಿನಲ್ಲಿ ಕಾಂಗ್ರೆಸ್ ಬಹಿರಂಗ ಚುನಾವಣಾ ಸಭೆ

0

ದ.ಕ ಜಿಲ್ಲೆ ಬುದ್ದಿವಂತರ ಜಿಲ್ಲೆ ,ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕಾಗಿದೆ – ಪದ್ಮರಾಜ್ ಆರ್ ಪೂಜಾರಿ

ಆಲಂಕಾರು: ಕಾಂಗ್ರೆಸ್ ಬಹಿರಂಗ ಚುನಾವಣಾ ಸಭೆಯು ಶ್ರೀ ದುರ್ಗಾಟವರ್ಸ್ ಆಲಂಕಾರಿನಲ್ಲಿ ನಡೆಯಿತು. 40 ವರ್ಷಗಳಲ್ಲಿ ಜಿಲ್ಲೆಗೆ ಕಾಂಗ್ರೆಸ್ ಸಂಸದರು ನೀಡಿರುವ ಕೊಡುಗೆ‌ ಹಾಗೂ ನಂತರದ 33 ವರ್ಷ ಬಿಜೆಪಿ ಸಂಸದರು ನೀಡಿರುವ ಕೊಡುಗೆಗಳನ್ನು ತುಲನೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ವಿಚಾರ ಅರ್ಥವಾಗುತ್ತದೆ. ಬುದ್ದಿವಂತರ ಜಿಲ್ಲೆ ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕಾಗಿದ್ದು, ಇದಕ್ಕಾಗಿ ಮತದಾರರು ಕಾಂಗ್ರೆಸನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಯವರು ತಿಳಿಸಿದರು.
ದ.ಕ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶ ಎಂಬ ಕಪ್ಪು ಪಟ್ಟಿಯನ್ನು ನಾವು ತೆಗೆದು ಹಾಕಬೇಕು ನಾವೆಲ್ಲ ಸರ್ವಧರ್ಮ ಸಮನ್ವಯತೆಯಿಂದ ಕೆಲಸ ಕಾರ್ಯಗಳನ್ನು ಮಾಡಿದರೆ ಮಾತ್ರ ದ.ಕ ಜಿಲ್ಲೆ ಅಭಿವೃದ್ಧಿ ಜಿಲ್ಲೆಯಾಗಲು ಸಾಧ್ಯ,ನಾವು ಯಾವುದೇ ಪ್ರಚೋದನೆಯ ಮಾತುಗಳಿಗೆ ಒಳಗಾಗದೇ, ಜಾಗೃತರಾಗಿ ಮತ ಚಲಾಯಿಸಬೇಕು. ಈ ಬಾರಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದರು.

ಜಿಲ್ಲೆಯಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಬಿಜೆಪಿಗರಿಗೆ ಸ್ಪಷ್ಟವಾಗಿ ಅರಿವಾಗಿದೆ. ಅದಕ್ಕಾಗಿ ಅಪಪ್ರಚಾರದ ಮಾರ್ಗ ಹಿಡಿದಿದ್ದಾರೆ. ಮುಂದಿನ ದಿನ ಅಪಪ್ರಚಾರಗಳಿಗೆ ಕಿವಿಕೊಡದೆ ಕಾರ್ಯಕರ್ತರು ಎದೆಗುಂದದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ, ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮನೆ ಮನೆ ತಲುಪಿಸಿ ಕಾಂಗ್ರೆಸ್ ನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸುವಂತೆ ವಿನಂತಿಸಿದರು.


ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಆಗದೇ ನ್ಯಾಯ ಸಿಕ್ಕಿಲ್ಲ, ಅಡಿಕೆ, ರಬ್ಬರ್ ಮೊದಲಾದ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಸಿಕ್ಕಿಲ್ಲ ನಾನು ಸಂಸದನಾಗುವುದು ನಿಶ್ಚಿತ. ಸಂಸದನಾದ ಬಳಿಕ ಪ್ರತಿ ವಿಧಾನ ಸಭಾಕ್ಷೇತ್ರಕ್ಕೆ ತಿಂಗಳಿಗೊಮ್ಮೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂಧನೆಯನ್ನು ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭ ಕಾಂಗ್ರೆಸ್ ನಿಂದ ಬಿ.ಜೆ.ಪಿಗೆ ಪಕ್ಷಾಂತರಗೊಂಡಿದ್ದ ಕೇಶವ ದೇವಾಡಿಗ ನಗ್ರಿ ಇವರು ಮರಳಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು,ಅಮ್ಅದ್ಮಿ ಪಾರ್ಟಿಯಿಂದ ಸುಂದರ ಬೈಲಕೆರೆ,ಹಾಗು ಜಗದೀಶ ಅಜ್ಜಿಕುಮೇರು ರಾಮಕುಂಜ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.


ಕಾಂಗ್ರೆಸ್ ಜಿಲ್ಲಾ ಸಮಿತಿ ಉಸ್ತುವಾರಿ ಬಿ. ಮಾಜಿ ಸಚಿವರಾದ ರಮಾನಾಥ ರೈ, ಸುಳ್ಯ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿ, ಕಡಬ ಉಸ್ತುವಾರಿ ವೆಂಕಪ್ಪ ಗೌಡ ಹಾಗು ಇನ್ನೀತರರು ಸಂದರ್ಭೋಚಿತ ವಾಗಿ ಮಾತನಾಡಿದರು.ವೇದಿಕೆಯಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ .ಟಿ. ಶೆಟ್ಟಿ, ಜಿ. ಕೃಷ್ಣಪ್ಪ, ಡಾ. ರಘು, ಕೆ.ಪಿ.ಸಿ.ಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಪಡ್ಡಿಲ್ಲಾಯ, ಕಡಬ ಉಸ್ತುವಾರಿ ಪಿ.ಪಿ. ವರ್ಗೀಸ್, ಕಡಬ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ, ತಾಪಂ ಮಾಜಿ ಸದಸ್ಯ ಫಝಲ್, ಪ್ರಮುಖರಾದ ಕಿರಣ್ ಬುಡ್ಲೆಗುತ್ತು, ಬಾಲಕೃಷ್ಣ ಬಲ್ಲೇರಿ,ಎ.ಸಿ ಜಯರಾಜ್ ಉಪಸ್ಥಿತರಿದ್ದರು.

ಆಲಂಕಾರು ಕಾಂಗ್ರೆಸ್ ಉಸ್ತುವಾರಿ ಪೀರ್ ಮಹಮ್ಮದ್ ಸಾಹೇಬ್ ಸ್ವಾಗತಿಸಿ,ಗ್ರಾಮ ಉಸ್ತುವಾರಿ ಪ್ರವೀಣ್ ಕುಮಾರ್ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿ, ಗ್ರಾಮ ಪ್ರಚಾರ ಸಮಿತಿ ಸದಸ್ಯ ಸದಾನಂದ ಮಡ್ಯೋಟ್ಟು ವಂದಿಸಿದರು.

LEAVE A REPLY

Please enter your comment!
Please enter your name here