ಪುತ್ತೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ವಾಣಿಜ್ಯ ವಿಭಾಗದಲ್ಲಿ ಶೇ 99% ಫಲಿತಾಂಶ ದಾಖಲಿಸಿದೆ.
ಮಡಿಕೇರಿ ಕಾಟಕೇರಿ ನಿವಾಸಿಯಾಗಿರುವ ಆಟೋ ರಿಕ್ಷಾ ಚಾಲಕ ಸಿ.ಎ. ಈಶ್ವರಪ್ಪ ಹಾಗೂ ರುಕ್ಮಣಿ ದಂಪತಿಗಳ ಪುತ್ರಿ ದಿಶಾ ಸಿ.ಎಚ್. ಆರೋಗ್ಯ ಸಮಸ್ಯೆಯ ನಡುವೆಯೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯನ್ನು ಬರೆದು 517 ಅಂಕಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಸಂಸ್ಥೆಗೆ ಉತ್ತಮ ಹೆಸರನ್ನು ತಂದಿರುವುದಾಗಿ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಸಂತಸ ವ್ಯಕ್ತಪಡಿಸಿದ್ದಾರೆ.
ಪುತ್ತೂರು ಆರ್ಯಾಪು ನಿವಾಸಿ ಕೆ.ಪಿ. ಇಬ್ರಾಹಿಂ ಹಾಗೂ ಜುಬೈದ ದಂಪತಿಗಳ ಪುತ್ರಿ ಆಯಿಷತ್ತುಲ್ ಮಿಶ್ರಿಯ ಕೆ.ಪಿ. ವಿವಾಹಿತರಾಗಿದ್ದು 2 ವರ್ಷದ ಮಗುವಿದ್ದರೂ ಸಹ ಕಲಾ ವಿಭಾಗದಲ್ಲಿ 479 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮುಕ್ವೆ ನಿವಾಸಿ ಶೇಕ್ ಎನ್.ಎ. ಸಲೀಂ ಹಾಗೂ ಆಯಿಷತ್ ಸನ ದಂಪತಿಗಳ ಪುತ್ರ ಶೇಖ್ ಮಹಮ್ಮದ್ ಸುಹೈಲ್ ತನ್ನ ದೃಷ್ಟಿ ದೋಷದ ತೊಂದರೆಯ ನಡುವೆಯೂ ವಾಣಿಜ್ಯ ವಿಭಾಗದಲ್ಲಿ 220 ಅಂಕಗಳನ್ನು ಪಡೆದು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾನೆ. ಬೆಳ್ತಂಗಡಿ ತಾಲೂಕು ಕಣಿಯೂರು ನಿವಾಸಿ ರಮೇಶ್ ಶೆಟ್ಟಿ ಹಾಗೂ ಶಾಂತಾ ದಂಪತಿಗಳ ಪುತ್ರಿ ಗ್ರೀಶಾ ಕಲಿಕೆಯಲ್ಲಿ ಎಲ್ಲಾ ವಿಷಯಗಳಲ್ಲಿ ಹಿಂದುಳಿದಿದ್ದರೂ ಪರೀಕ್ಷೆಯ ಕೊನೆಯ ದಿನಗಳಲ್ಲಿ ನಮ್ಮ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಕಲಿಯುವ ಮೂಲಕ 224 ಅಂಕಗಳೊಂದಿಗೆ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾಳೆ ಎಂದು ಅವರು ಹೇಳಿದ್ದಾರೆ. ಇಂತಹ ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಬೋಧನೆಯನ್ನು ಮಾಡಿದ ಉಪನ್ಯಾಸಕ ವೃಂದದವರಿಗೆ ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಅಭಿನಂದನೆಯನ್ನು ಸಲ್ಲಿಸಿದ್ದಾರೆ.