ಉಪ್ಪಿನಂಗಡಿ: ಬಡವರ ಬದುಕಿಗೆ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಭದ್ರತೆ ಒದಗಿಸಿದ್ದು, ಇದರಿಂದಾಗಿ ಅವರಿಗೆ ಸ್ವಾವಲಂಬಿ ಬದುಕು ಕಟ್ಟಲು ಸಾಧ್ಯವಾಗಿದೆ. ಕಾಂಗ್ರೆಸ್ ಸರಕಾರದ ಯೋಜನೆಗಳು ಜನರಿಗೆ ಹೇಗೆ ಉಪಯೋಗವಾಗಿದೆ ಎಂಬುದನ್ನು ಕಾರ್ಯಕರ್ತರು ಮನೆ- ಮನೆಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.
34 ನೆಕ್ಕಿಲಾಡಿಯಲ್ಲಿ ನಡೆದ ನೆಕ್ಕಿಲಾಡಿ ವಲಯ ಕಾಂಗ್ರೆಸ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ನ ಪಂಚ ಗ್ಯಾರಂಟಿಯನ್ನು ಪಡೆದುಕೊಂಡವರಿಗೆ ಈಗಾಗಲೇ ಸುಮಾರು 30 ಸಾವಿರದಷ್ಟು ಹಣ ಬಂದಿದೆ. ಈ ಗ್ಯಾರಂಟಿ ಯೋಜನೆಗಳಿಂದಾಗಿ ಅದೆಷ್ಟೋ ಕುಟುಂಬಗಳು ಆರ್ಥಿಕವಾಗಿ ಸದೃಢವಾಗುವಂತಾಗಿದೆ. ಇವೆಲ್ಲಾ ಯೋಜನೆಗಳು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಗೆಲುವಿಗೆ ಕಾರಣವಾಗಲಿದೆ. ಕಾಂಗ್ರೆಸ್ ಪಕ್ಷವು ಬಡವರ, ಅಭಿವೃದ್ಧಿ ಪರ ಇರುವ ಸರಕಾರವಾಗಿದೆ ಎಂಬುದನ್ನು ಜನರಿಗೆ ಕಾರ್ಯಕರ್ತರು ಅರ್ಥ ಮಾಡಿಸಬೇಕು ಎಂದರು.
ವೇದಿಕೆಯಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಚುನಾವಣಾ ಉಸ್ತುವಾರಿಗಳಾದ ಕಾವು ಹೇಮನಾಥ ಶೆಟ್ಟಿ, ಎಂ.ಎಸ್. ಮುಹಮ್ಮದ್, ಡಾ. ರಘು ಬೆಳ್ಳಿಪ್ಪಾಡಿ, ರಮಾನಾಥ್, ನಿರಂಜನ್ ರೈ ಮಠಂತಬೆಟ್ಟು, ಅಶ್ರಫ್ ಬಸ್ತಿಕ್ಕಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಡಿಸಿಸಿ ಉಪಾಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಬೂತ್ ಅಧ್ಯಕ್ಷರಾದ ಹಮೀದ್ ಪಿ.ಟಿ., ಅಬ್ದುಲ್ ಖಾದರ್ ಆದರ್ಶನಗರ, ನವಾಝ್ ಕರ್ವೇಲು, ಇಸಾಕ್, ವಲಯ ಉಪಾಧ್ಯಕ್ಷ ಇಕ್ಬಾಲ್ ಪಾಂಡೇಲು, ಮುಖಂಡರಾದ ರಾಧಾಕೃಷ್ಣ ನಾಯ್ಕ, ಜಯಪ್ರಕಾಶ್ ಬದಿನಾರು, ನಝೀರ್ ಮಠ, ಅಸ್ಕರ್ ಅಲಿ, ಶೇಖಬ್ಬ ಹಾಜಿ, ಈಶ್ವರ ಭಟ್ ಪಂಜಿಗುಡ್ಡೆ, ಭಾಸ್ಕರ ಕೋಡಿಂಬಾಳ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜೆರಾಲ್ಡ್ ಮಸ್ಕರ್ಹೇನಸ್, ಉಲ್ಲಾಸ್ ಶೆಟ್ಟಿ, ನೌಫಲ್ ನೆಕ್ಕಿಲಾಡಿ, ಗಣೇಶ ಬೀತಲಪ್ಪು, ಅಶೋಕ ಬೀತಲಪ್ಪು, ಶರೀಕ್ ಅರಪ್ಪಾ, ಅಮೀರ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ಸ್ವಾಗತಿಸಿದರು. ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.