ಪುತ್ತೂರು: ಮಂಗಳೂರಿನಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಲಿದ್ದು, ಪುತ್ತೂರಿನಿಂದ 5 ಸಾವಿರಕ್ಕೂ ಮಿಕ್ಕಿದ ಮೋದಿ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವ ಇಚ್ಛೆಯಿಂದ ತಮ್ಮ ತಮ್ಮ ವಾಹನದಲ್ಲಿ ಪುತ್ತೂರು ವಿಧಾನಸಭೆಯ ಎಲ್ಲಾ ಬೂತ್ ಗಳಿಂದಲೂ ಕಾರ್ಯಕರ್ತರು ತೆರಳಲಿದ್ದಾರೆ.ತಾವೇ ಹಣ ಹೊಂದಿಸಿ ಬಸ್ ವ್ಯವಸ್ಥೆ ಮಾಡಿ ಮಂಗಳೂರಿಗೆ ಕಾರ್ಯಕರ್ತರು ಸಾಗಲಿದ್ದಾರೆ.ನರೇಂದ್ರ ಮೋದಿಯವರ ರೋಡ್ ಶೋ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು 4 ಲಕ್ಷಕ್ಕೂ ಮಿಕ್ಕಿ ಮತಗಳಲ್ಲಿ ಗೆಲ್ಲಿಸುವ ಮುನ್ನುಡಿಯಾಗಲಿದೆ.ಆ ಮೂಲಕ ಕೇಂದ್ರದ 400ಕ್ಕೂ ಮಿಕ್ಕಿ ಸ್ಥಾನ ಗೆಲ್ಲಲಿದ್ದು ಅದರಲ್ಲೊಂದು ದಕ್ಷಿಣ ಕನ್ನಡ ಒಂದಾಗಲಿದೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೇಸ್ ಒಡೆದ ಮನೆಯಾಗಿದೆ. ಈವರೆಗೆ ಕಾಂಗ್ರೇಸ್ ಗೆ ಜಿಲ್ಲೆಯಲ್ಲಿ ಒಂದು ಜಿಲ್ಲಾ ಮಟ್ಟದ ಸಮಾವೇಶ ಮಾಡಲು ಸಾಧ್ಯವಾಗಿಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಸೋಲಿನ ಹತಾಶೆಯಲ್ಲಿದೆ.ಸೋಲಿನ ಹತಾಶೆಯಲ್ಲಿದ್ದು, ಕಾಂಗ್ರೆಸ್ ಈಗಾಗಲೇ ಬಿಜೆಪಿ ವಿರುದ್ಧ ಸೋಲನ್ನು ಒಪ್ಪಿಕೊಂಡಿದೆ.ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಿಯೂ ಆಗಿದೆ ಎಂದರು.