




ನಾಳೆಯ ನೆಮ್ಮದಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಅಶೋಕ್ ರೈ



ಪುತ್ತೂರು: ನಾವು ಮುಂದೆ ನೆಮ್ಮದಿಯಿಂದ ಬದುಕು ಸಾಗಿಸಬೇಕಾದರೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಬಡವರ ಪರ ಇರುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದ್ದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಶಾಸಕರಾದ ಅಶೋಕ್ ರೈ ಮನವಿ ಮಾಡಿದರು.





ಅವರು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಆಧ್ಯಕ್ಷ ಡಾ.ರಾಜಾರಾಂ ರವರ ರಾಮ ನಿವಾಸದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಪ್ರತೀ ಚುನಾವಣೆಯಲ್ಲಿ ಧರ್ಮದ ವಿಚಾರವನ್ನು ಮುಂದಿಟ್ಟು ಮುಗ್ದ ಜನರನ್ನು ವಂಚಿಸಿ ಅಧಿಕಾರಕ್ಕೇರುವ ಬಿಜೆಪಿಗೆ ಹೇಳಿಕೊಳ್ಳುವ ಅಭಿವೃದ್ದಿ ಕೆಲಸಗಳೇ ಇಲ್ಲ. ಅಭಿವೃದ್ದಿಯಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಐದು ಗ್ಯಾರಂಟಿ ಜನರ ಬದುಕನ್ನು ಹಸನಾಗಿಸಿದೆ ಎಂದು ಹೇಳಿದರು.
ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಮಾತನಾಡಿ ನಕಲಿ ಹಿಂದುತ್ವ ಬಿಜೆಪಿಗೆ ಪ್ರತೀ ಬಾರಿಯೂ ಚುನಾವಣೆಯ ಅಸ್ತ್ರವಾಗಿದೆ. ದುಷ್ಟ ಆಡಳಿತ ನಡೆಸುವ ಮೂಲಕ ಜನರ ಬದುಕಿಗೆ ಕೊಳ್ಳಿ ಇಡುತ್ತಿರುವ ಬಿಜೆಪಿ ಸರಕಾರ ದೇಶದಿಂದ ತೊಲಗಬೇಕು. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬಡವರು ಸ್ವಾಭಿಮಾನದಿಂದ ಬದುಕಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ,ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್,ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತಾ,ಉಸ್ತುವಾರಿ ರಮನಾಥ ವಿಟ್ಲ, ಡಿಸಿಸಿ ಕಾರ್ಯದರ್ಶಿನಝೀರ್ ಮಠ,ಸೋಮನಾಥ,ವಲಯ ಅಧ್ಯಕ್ಷ ಆನಂದ ಕೊಪ್ಪಳ, ನವೀನ್ ರೈ, ಈಶ್ವರಭಟ್ ಪಂಜಿಗುಡ್ಡೆ, ಫಾರೂಕ್ ಬಾಯಬ್ಬೆ,ಉಸ್ತುವಾರಿ ಭಾಸ್ಕರ ಕೋಡಿಂಬಾಳ ಮೊದಲಾದವರು ಉಪಸ್ಥಿತರಿದ್ದರು.








