ಪೆರಾಬೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೆರಾಬೆ ಗ್ರಾ.ಪಂ.ಕಾಂಗ್ರೆಸ್ ಸಮಿತಿ ವತಿಯಿಂದ ಗ್ರಾ.ಪಂ.ನ 5 ವಾರ್ಡುಗಳ ಚುನಾವಣಾ ಪ್ರಚಾರ ಸಭೆ ಕುಂತೂರು ಆಶೀರ್ವಾದ ಸಭಾಂಗಣದಲ್ಲಿ ಎ.13ರಂದು ನಡೆಯಿತು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಡಬ ಬ್ಲಾಕ್ನ ಸಂಯೋಜಕರಾದ ಜಿ.ಪಂ.ಮಾಜಿ ಸದಸ್ಯ ಪಿ.ಪಿ ವರ್ಗೀಸ್ರವರು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಹಾಗೂ ಲೋಕಸಭಾ ಚುನಾವಣೆಯ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೆಪಿಸಿಸಿ ಸದಸ್ಯ ಡಾ.ರಘು ಅವರು ಮಾತನಾಡಿ, ಕಾರ್ಯಕರ್ತರು ಮುಂದಿನ ಕಡಿಮೆ ಅವಧಿಯಲ್ಲಿ ನಿದ್ದೆಗೆಟ್ಟು ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಹೇಳಿದರು. ಪಕ್ಷದ ಮುಖಂಡರಾದ ಪೀರ್ ಮಹಮ್ಮದ್ ಸಾಹೇಬ್ರವರು ಮಾತನಾಡಿ, ಸಾಮರಸ್ಯದ ಬದುಕಿಗೆ ಹಾಗೂ ನೆಮ್ಮದಿಯ ಜೀವನಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ ಎಂದರು.
ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ರೈ ಪರಾರಿಗುತ್ತು, ಉಸ್ತುವಾರಿ ಯಾಕುಬ್ ಕೋಚಕಟ್ಟೆ, ಕಡಬ ಬ್ಲಾಕ್ ಪ್ರಚಾರ ಸಮಿತಿ ಸಹ ಉಸ್ತುವಾರಿ ಸದಾನಂದ ಪೂಜಾರಿ, ಗ್ರಾ.ಪಂ.ಸದಸ್ಯರಾದ ಲೀಲಾವತಿ, ಮ್ಯಾನ್ಸಿ ಸಾಜನ್, ಕಾವೇರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಇಬ್ರಾಹಿಂ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೆರಾಬೆ ಗ್ರಾ.ಪಂ. ವಾರ್ಡು ಸಮಿತಿ ಅಧ್ಯಕ್ಷರಾದ ಕೇಶವ, ಮಹಮ್ಮದ್ ಆಲಿ, ಸ್ಕರಿಯಾ, ಅಬ್ದುಲ್ಲಾ, ಕುಂತುರು 1ನೇ ವಾರ್ಡ್ನ ಉಪಾಧ್ಯಕ್ಷ ರಫೀಕ್, ಶಿವರಾಂ, ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ವಿಠಲ ರೈ, ಗುರುಪ್ರಸಾದ ರೈ, ಬ್ಲಾಕ್ ಪದಾಧಿಕಾರಿಗಳು, ಪಂಚಾಯತ್ ಸಮಿತಿ ಪದಾಧಿಕಾರಿಗಳು, ವಾರ್ಡ್ ಸಮಿತಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪಕ್ಷದ ಉಸ್ತುವಾರಿ, ಕಡಬ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷ ಸಾಜನ್ ವರ್ಗೀಸ್ ವಂದಿಸಿದರು.
ಕಾಂಗ್ರೆಸ್ಗೆ ಸೇರ್ಪಡೆ:
ಪೆರಾಬೆ ಗ್ರಾ.ಪಂ. ಮಾಜಿ ಸದಸ್ಯ ನಾಗಪ್ಪ ಗೌಡ, ಕುಶಾಲಪ್ಪ ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಈ ಸಂದರ್ಭದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಧ್ವಜ ಸ್ವೀಕರಿಸಿ ಮಾತನಾಡಿದ ನಾಗಪ್ಪ ಗೌಡರವರು, ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ಬಿಜೆಪಿ ಆಡಳಿತವಿರುವ ಪೆರಾಬೆ ಗ್ರಾ.ಪಂ.ತಾರತಮ್ಯ ಮಾಡಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಯ್ ಅಬ್ರಹಾಂ ಅವರು ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದಕ್ಕೆ ಕೃತಜ್ಞತೆ ಸೂಚಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.