ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ಯುವ ಗಾಯಕ ನಿತೇಶ್ ಅನಂತಾಡಿ ಮತ್ತು ವಾಣಿ ಮಧ್ವರವರ ಕಂಠದಲ್ಲಿ ಮೂಡಿಬಂದಿರುವ, ಯುವ ಸಾಹಿತಿ ಶೆಟ್ಟಿ ಅಜಯ್ ರಾಜ್ ರವರ ಸಾಹಿತ್ಯ ರಚನೆಯ ಜ್ಞಾನ ಜಾಗರಣೆ ಭಕ್ತಿಗೀತೆಯ ಲೋಕಾರ್ಪಣೆಯನ್ನು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಕೆ.ಯಸ್.ಕೋಡಿಂಬಾಡಿಯವರು ನೇರವೆರಿಸಿ ಭಗವಂತನನ್ನು ನೇರವಾಗಿ ಸಂಪರ್ಕಿಸಬಹುವುದಾದರೆ ಅದು ಭಜನೆ ಮತ್ತು ಭಕ್ತಿಗೀತೆಯಿಂದ ಮಾತ್ರ ಸುಲಭ ಸಾಧ್ಯ ಎಂದು ಶುಭಹಾರೈಸಿದರು.
ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ಪರಿಷತ್ ನ ಸದಸ್ಯೆ ಮಲ್ಲಿಕಾ ಪಕ್ಕಳ ಮತ್ತು ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲವರು ಸೇರಿ ಪೋಸ್ಟರ್ ಅನಾವರಣಗೊಳಿಸಿ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಮುಖಂಡರುಗಳಾದ ಕಾವು ಹೇಮನಾಥ ಶೆಟ್ಟಿ,ರಾಜರಾಮ ಶೆಟ್ಟಿ ಕೋಲ್ಪೆಗುತ್ತು,ತಿಮ್ಮಪ್ಪ ಗೌಡ ಬಲ್ನಾಡು,ಯಂ.ಬಿ. ವಿಶ್ವನಾಥ ರೈ,ರಂಜಿತ್ ಬಂಗೇರ,ನಿಹಾಲ್ ಶೆಟ್ಟಿ ಸಾಮೆತಡ್ಕ,ರಾಕೇಶ್ ರೈ ಕುದ್ಕಾಡಿ,ರಿತೇಶ್ ಶೆಟ್ಟಿ,ಸುಮಾ ಅಶೋಕ್ ರೈ, ಅನಿತಾ ಹೇಮನಾಥ ಶೆಟ್ಟಿ, ಹರಿಣಾಕ್ಷಿ ಜಗದೀಶ್ ಶೆಟ್ಟಿ, ಶಿವಪ್ರಸಾದ ರೈ ಮಠಂತಬೆಟ್ಟು,ಸನತ್ ರೈ ಒಳತಡ್ಕ ಮುಂತಾದವರು ಉಪಸ್ಥಿತರಿದ್ದರು.
ಈ ಭಕ್ತಿಗೀತೆಯನ್ನು ಯುವ ಉದ್ಯಮಿ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು,ಕೋಡಿಂಬಾಡಿ ಮತ್ತು ಅಲ್ ಹಿಲಾಲ್ ಹಾಸ್ಪಿಟಲ್ ಮನಾಮ ಬೆಹೈರಿನ್ ನ ಉದ್ಯೋಗಿ ಪ್ರೇಮಾ ಹರೀಶ್ ಕೆ.ರವರು ನಿರ್ಮಾಪಕರಾಗಿದ್ದು ಸುವಾನಿ ಕ್ರಿಯೇಷನ್ ಅರ್ಪಿಸುತ್ತಿದೆ.ವಿಡಿಯೋಗ್ರಾಫಿ ಮತ್ತು ಎಡಿಟಿಂಗ್ ರಕ್ಷಿತ್ ಆರ್.ಕೆ,ನೃತ್ಯ ವಿದುಷಿ ಅನುಶ್ರೀ ಸಾಮೆತಡ್ಕ ಹಾಗೂ ನವೀನ್ ರೈ ಬನ್ನೂರು,ರೂಪೇಶ್ ಪುತ್ತೂರು ರವರ ಸಹಕಾರವಿರಲಿದೆ.
ಸುವಾನಿ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿರುವ ಈ ಭಕ್ತಿಗೀತೆಯನ್ನು https://youtu.be/8m-dFrZcnx4?si=00TfqEI7qEI3VmNC ಲಿಂಕ್ ನಲ್ಲಿ ವೀಕ್ಷಿಸಬಹುದು.