





ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತವಾದ ಮಲ್ಟಿ ಪರ್ಪಸ್ ಹಾಲ್ ’ಸಿಂಗಾರ ಮಂಟಪ ಕೋಡಿಂಬಾಡಿ’ ಯುಗಾದಿಯ ಶುಭದಿನವಾದ ಎ.9ರಂದು ಬೆಳಿಗ್ಗೆ ಶುಭಾರಂಭಗೊಂಡಿತು.



ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಜಿ.ಪಂ.ಮಾಜಿ ಸದಸ್ಯೆ ಶಯನಾ ಜಯಾನಂದ, ಕೋಡಿಂಬಾಡಿ ಗ್ರಾ.ಪಂ.ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರು ದೀಪ ಪ್ರಜ್ವಲಿಸಿದರು.






ಕೋಡಿಂಬಾಡಿ ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿಯವರು ಹಿಂಗಾರ ಅರಳಿಸಿದರು. ಮಾಜಿ ಸಚಿವ ರಮಾನಾಥ ರೈ, ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಜಯಾನಂದ ಕೋಡಿಂಬಾಡಿ, ಸುದೇಶ್ ಶೆಟ್ಟಿ, ಹರೀಶ್, ಕುಮಾರನಾಥ, ಹರೀಶ್ಕುಮಾರ್ ನಿರಾಳ ಹಾಗೂ ಮತ್ತಿತರರ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಿಂಗಾರ ಮಂಟಪದ ಮಾಲಕ ದಾಮೋದರ ಪುತ್ಯೆ ಅವರ ತಂದೆ ಬೊಮ್ಮಣ್ಣ ಗೌಡ, ತಾಯಿ ಸುಂದರಿ, ಸಹೋದರ ಉಪ್ಪಿನಂಗಡಿ ನಾರ್ಟನ್ ಸೋಲಾರ್ನ ಯತೀಶ್ ಪುತ್ಯೆ, ಶರತ್ ಹಾಗೂ ಕುಟುಂಬಸ್ಥರು, ಬಂಧುಗಳು ಸೇರಿದಂತೆ ಹಲವು ಮಂದಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸೀತಾರಾಮ ಕೇವಳ ನಿರೂಪಿಸಿದರು.

ಸಿಂಗಾರ ಮಂಟಪದ ಮಾಲಕ ದಾಮೋದರ ಪುತ್ಯೆ ಅವರು ಸ್ವಾಗತಿಸಿ ಮಾತನಾಡಿ, ಸಿಂಗಾರ ಮಂಟಪವು ತಾಲೂಕಿನ ಎರಡು ಪ್ರಮುಖ ಪಟ್ಟಣಗಳಾಗಿರುವ ಪುತ್ತೂರು ಹಾಗೂ ಉಪ್ಪಿನಂಗಡಿಯಯಿಂದ 7 ಕಿ.ಮೀ.ದೂರದ ಕೋಡಿಂಬಾಡಿಯಲ್ಲಿ ಹೆದ್ದಾರಿ ಬದಿಯಲ್ಲಿಯೇ ಇದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸಕಲ ವ್ಯವಸ್ಥೆಗಳನ್ನೂ ಒಳಗೊಂಡಿರುವ ಸುಸಜ್ಜಿತವಾದ ಮಂಟಪ ಇದಾಗಿದೆ. ಇಲ್ಲಿ ವಿಶಾಲ ಪಾರ್ಕಿಂಗ್, ಸ್ವಚ್ಛವಾದ ಅನ್ನಛತ್ರ, ತಡೆರಹಿತ ವಿದ್ಯುತ್ ವ್ಯವಸ್ಥೆಗಳನ್ನು ಒಳಗೊಂಡ ಸುಸಜ್ಜಿತ ಸಭಾಂಗಣ ಒಳಗೊಂಡಿದ್ದು ಗ್ರಾಹಕರ ಸೇವೆಗೆ ಸಿದ್ಧವಾಗಿದೆ. ಬುಕ್ಕಿಂಗ್ಗಾಗಿ ಮೊ: 9901037583, 9481019260, 9448696110, 9945356504ಗೆ ಸಂಪರ್ಕಿಸಬಹುದು ಎಂದು ಹೇಳಿ ಸಹಕಾರ ಕೋರಿದರು.







