ಪುತ್ತೂರು: ಪೆರ್ಲಂಪಾಡಿ ದೊಡ್ಡಮನೆ- ಸ್ಥಳಮನೆಯ ನೂತನ ತರವಾಡು ಮನೆಯ ಗೃಹಪ್ರವೇಶ ಮತ್ತು ಶ್ರೀ ರುದ್ರಚಾಮುಂಡಿ ಮತ್ತು ಸಹಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮ ಏ.22ರಿಂದ ಏ.26ರವರೆಗೆ ನೀಲೇಶ್ವರ ಬ್ರಹ್ಮಶ್ರೀ ಕೆ.ಯು. ಅರೆವತ್ತಿನ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಏ.22ರಂದು ಸಂಜೆ 5 ಗಂಟೆಗೆ ತಂತ್ರಿವರ್ಯರ ಆಗಮನ, 7ಗಂಟೆಗೆ ದೇವತಾ ಸಮೂಹ ಪ್ರಾರ್ಥನೆ, ಪುಣ್ಯಾಹವಾಚನ, ಸ್ಥಳಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಏ.23ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಬಿಂಬಶುದ್ಧಿ, ಅನುಜ್ಞಾಕಲಶ, ಜೀಮೋಜ್ವಾಪಸನೆ, ಶೆಯ್ಯೋಪೂಜೆ, 10 ಗಂಟೆಗೆ ನಾಗಪ್ರತಿಷ್ಠೆ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ, ಮಹಾಪೂಜೆ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ 6 ಗಂಟೆಯಿಂದ ಅಧಿವಾಸಹೋಮ, ಯಾನಾಧಿವಾಸ, ಕಳಶಪೂಜೆ, ತ್ರಿಕಾಲಪೂಜೆ ನಡೆಯಲಿದೆ.
ಏ.24ರಂದು ಬೆಳಿಗ್ಗೆ 5ಗಂಟೆಗೆ ಗಣಪತಿ ಹೋಮ, ಪ್ರಸಾದ ಪ್ರತಿಷ್ಠೆ, 7.30ರ ವೃಷಭ ಲಗ್ನದಲ್ಲಿ ತರವಾಡು ಮನೆಯ ಗೃಹಪ್ರವೇಶ, ವೆಂಕಟ್ರಮಣ ದೇವರ ಮುಡಿಪು ಪೂಜೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ 6 ಗಂಟೆಯಿಂದ ದೀಪಾರಾಧನೆ, ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8ಗಂಟೆಯಿಂದ ಗುರು ಕಾರ್ನೊರು, ಕಲ್ಲುರ್ಟಿ ದೈವ, ವರ್ಣಾರ ಪಂಜುರ್ಲಿ ದೈವನೇಮ, ಭೂಮಿ ಪಂಜುರ್ಲಿ ದೈವನೇಮ ನಡೆಯಲಿದೆ.
ಏ.26ರಂದು ಬೆಳಿಗ್ಗೆ 6 ಗಂಟೆಯಿಂದ ರಕ್ತೇಶ್ವರಿ ದೈವ ನೇಮ, ಕುಪ್ಪೆ ಪಂಜುರ್ಲಿ ನೇಮ, ಎ.26ರಂದು ಬೆಳಿಗ್ಗೆ 6ರಿಂದ ನಾಗಚಾಮುಂಡಿ ನೇಮ, ಧರ್ಮದೈವ ರುದ್ರಚಾಮುಂಡಿ ನೇಮ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಗುಳಿಗ ನೇಮ ನಡೆಯಲಿದೆ.