ನೃತ್ಯಾಂತರಂಗದಲ್ಲಿ ಯೋಗೇಶ್ ಕುಮಾರ್, ಸ್ನೇಹಾ ದಂಪತಿಯಿಂದ ನೃತ್ಯ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಎ.21ರಂದು ಸಂಜೆ ದರ್ಬೆ ಶಶಿಶಂಕರ ಸಭಾಭವನದಲ್ಲಿ ನೃತ್ಯಾಂತರಂಗ ಸರಣಿ 107ನೇ ಕಾರ್ಯಕ್ರಮವಾಗಿ ಯೋಗೇಶ್ ಕುಮಾರ್ ಮತ್ತು ಸ್ನೇಹಾ ನಾರಾಯಣ್ ಬೆಂಗಳೂರು ಅವರಿಂದ ಭರತನಾಟ್ಯ ಪ್ರಸ್ತುತಿಗೊಂಡಿತು.


ಗಣೇಶ ಸ್ತುತಿ, ಜಠಾಯು, ಆಂಜನೇಯನ ನೃತ್ಯದೊಂದಿಗೆ ಯೋಗೇಶ್ ಕುಮಾರ್ ಮತ್ತು ಸ್ನೇಹ ಅವರು ನೃತ್ಯದ ಕುರಿತ ಕಾರ್ಯಾಗಾರ ನಡೆಸಿದರು. ಕರ್ನಾಟಕ ಸಂಗೀತ ಕಲಾವಿದೆ ಮತ್ತು ಉಪನ್ಯಾಸಕಿ ಸುಮನಾ ಪ್ರಶಾಂತ್ ಅವರು ಅಭ್ಯಾಗತರಾಗಿ ಭಾಗವಹಿಸಿದ್ದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಕಲಾ, ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್, ಸಂಚಾಲಕಿ ಶಶಿಪ್ರಭಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here