ಬಿಜೆಪಿಯಿಂದ ನಾರಾಯಣ ಗುರುಗಳಿಗೆ ಅವಮಾನ-ಬಿಲ್ಲವ ಮತ್ತು ಹಿಂದುಳಿದ ವರ್ಗಗಳ ಸಮಾಜದ ಭಾವನೆಗೆ ಧಕ್ಕೆ -ಡಾ. ರಾಜಾರಾಂ ಕೆ.ಬಿ.

0


ಪುತ್ತೂರು: ದೆಹಲಿಯಲ್ಲಿ ನಡೆಯಲಿದ್ದ ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋವನ್ನು ಪ್ರದರ್ಶಿಸಲು ಅವಕಾಶ ನಿರಾಕರಿಸಿದ ಹಾಗೂ ರಾಜ್ಯದ ಶಾಲಾ ಪಠ್ಯ ಪುಸ್ತಕದಲ್ಲಿದ್ದ ನಾರಾಯಣ ಗುರುಗಳ ಜೀವನ ಚರಿತ್ರೆಯ ಪಾಠವನ್ನು ಕಿತ್ತೆಸೆದಿರುವ ನಡವಳಿಕೆಯನ್ನು ಬಿ.ಜೆ.ಪಿ ಸರಕಾರ ಮಾಡಿರುವುದು ಬಿಲ್ಲವ ಸಮುದಾಯದ ಹಾಗೂ ಹಿಂದುಳಿದ ವರ್ಗಗಳ ಜನರ ಭಾವನೆಗೆ ಧಕ್ಕೆ ಉಂಟು ಮಾಡಿರುವ ಕೆಲಸ ಮಾಡಿರುತ್ತಾರೆ ಇದು ಖಂಡನೀಯ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಹೇಳಿದರು.


ಪುತೂರು ನಗರ ಕಾಂಗ್ರೆಸ್ ವ್ಯಾಪ್ತಿಯ ಉಜ್ರುಪಾದೆ ಎಂಬಲ್ಲಿ ಎ.22ರಂದು ಲೋಕಸಭಾ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದರು. ನಾರಾಯಣ ಗುರುಗಳು ಶೋಷಿತ ಜನಾಂಗಕ್ಕೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸಿ ಕೊಟ್ಟವರು. ಸಮಾಜದ ಪರಿವರ್ತನೆಗೆ ನಾರಾಯಣ ಗುರುಗಳು ಮಾಡಿರುವ ಕೆಲಸ ಅಪಾರವಾಗಿರುತ್ತದೆ. ಇಂತಹ ವ್ಯಕ್ತಿಗೆ ಬಿ.ಜೆ.ಪಿ ಸರಕಾರ ಅವಮಾನಿಸುವಂತಹ ಕೆಲಸ ಮಾಡಿದೆ. ಆದುದರಿಂದ ಬಿಲ್ಲವರು ಸೇರಿ ಹಿಂದುಳಿದ ವರ್ಗಗಳ ಸಮುದಾಯದ ಜನರು ಇಂತಹ ಅಸ್ಪೃಶ್ಯತಾ ಮನಸ್ಥಿತಿ ಹೊಂದಿರುವ ಕೇಂದ್ರ ಬಿ.ಜೆ.ಪಿ ಸರಕಾರವನ್ನು ಕಿತ್ತೊಗೆಯುವ ಧೃಢ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಮಹಮ್ಮದ್ ಆಲಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಯಸ್ ಮಹಮ್ಮದ್, ಎಂ ವಿಶ್ವನಾಥ ರೈ ಮೊದಲಾದವರು ಮಾತನಾಡಿದರು. ಈ ಸಭೆಯಲ್ಲಿ ಚುನಾವಣಾ ಉಸ್ತುವಾರಿಗಳಾದ ರಿಯಾಜ್ ಪರ್ಲಡ್ಕ, ರೋಶನ್ ರೈ ಬನ್ನೂರು, ಮೌರಿಸ್ ಮಸ್ಕರೇನಸ್, ಪ್ರವೀಣ್ ಚಂದ್ರ ಆಳ್ವ, ನಜೀರ್ ಮಠ, ರಮನಾಥ ವಿಟ್ಲ, ಬ್ಲಾಕ್ ಉಪಾಧ್ಯಕ್ಷರಾದ ನಾರಾಯಣ ಗೌಡ, ಬಲ್ನಾಡು ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ಗೌಡ ವಳಗುಡ್ಡೆ, ಶರೀಫ್ ರೋಯಲ್, ಡಿ.ಸಿ.ಸಿ ಸದಸ್ಯರಾದ ಸುಧಾ ಕುಂಜತ್ತಾಯ, ನಗರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಂತಿ ಬಲ್ನಾಡು, ದಾಮೋದರ ಭಂಡಾರ್‌ಕರ್, ನವೀನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here