ಪುತ್ತೂರು: ಬನ್ನೂರು ಕೃಷ್ಣನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ವಾರ ನಡೆಯುವ ಮಕ್ಕಳ ಬೇಸಿಗೆ ಶಿಬಿರಕ್ಕೆ ಎ.22ರಂದು ಚಾಲನೆ ನೀಡಲಾಯಿತು.
ಅಂಬಿಕಾ ಸಮೂಹ ಸಂಸ್ಥೆಯ ನಿರ್ದೇಶಕ ಸುರೇಶ್ ಶೆಟ್ಟಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪರಿಸರದ ನಡುವೆ ಇರುವ ಶಾಲೆಯ ಬಗ್ಗೆ ಅಭಿಮಾನದ ನುಡಿಗಳನ್ನು ಆಡಿದರು. ಶಿಬಿರ ಮಕ್ಕಳ ಚಟುವಟಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ. ಶಿಬಿರವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಅತಿಥಿಯಾಗಿ ಭಾಗವಹಿಸಿದ್ದ ಮಕ್ಕಳ ಸಾಹಿತಿ ಉಲ್ಲಾಸ ಪೈ ಮಾತನಾಡಿ, ಬೇಸಿಗೆ ಶಿಬಿರವು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ರಾಜೇಶ್ ಬೆಜ್ಜಂಗಳ ಮಾತನಾಡಿ ಎವಿಜಿ ಶಾಲೆ ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದರು. ಎವಿಜಿ ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸಂಚಲಾಕ ಎ ವಿ ನಾರಾಯಣಗೌಡ ಅವರು ಸ್ವಾಗತಿಸಿ, ಅತಿಥಿಯರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಪುಷ್ಪವತಿ ಕಳುವಾಜೆ, ಪ್ರತಿಭಾದೇವಿ, ವನಿತ ಏ ವಿ, ಡಾ. ಅನುಪಮಾ ಹಾಗೂ ಸಂಸ್ಥೆಯ ಶಿಕ್ಷಕಿಯರಾದ ವನಿತಾ, ರಂಜಿತ ರೈ, ಸಹಾಯಕರಾದ ಆನಂದ, ಭುವನೇಶ್ವರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪೋಷಕರು ಹಾಗೂ ಪುಟಾಣಿಗಳು ಉಪಸ್ಥಿತಿಯಲ್ಲಿದ್ದರು. ಶಿಕ್ಷಕಿ ಯಶುಭ ರೈ ಪ್ರಾರ್ಥಿಸಿದರು. ಸಂಹಿತ ಅತಿಥಿಗಳನ್ನು ಪರಿಚಯಿಸಿದರು. ರಾಧ ಕಾರ್ಯಕ್ರಮ ನಿರೂಪಿಸಿದರು. ರಿಮಾ ಲೋಬೊ ವಂದಿಸಿದರು.